ETV Bharat / city

ಮಂಗಳೂರು: ಶಾಂತಿ, ಸಮಾನತೆ ಸಾರಿದ ಸರ್ವಧರ್ಮಗಳ ಇಫ್ತಾರ್ ಮುಸ್ಸಂಜೆ

ಧರ್ಮ ಕಲಹಗಳು ಸದ್ದು ಮಾಡುತ್ತಿರುವ ಮಧ್ಯೆಯೇ ಮಂಗಳೂರಿನ ಆಲದ ಮರದಡಿ ಸರ್ವಧರ್ಮಗಳ ಇಫ್ತಾರ್​ ಮುಸ್ಸಂಜೆ ಕಾರ್ಯಕ್ರಮ ಎಲ್ಲರ ಗಮನ ಸೆಳೆದಿದೆ.

iftar-feast
ಇಫ್ತಾರ್ ಮುಸ್ಸಂಜೆ
author img

By

Published : Apr 30, 2022, 5:36 PM IST

ಮಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಧರ್ಮ ಕಲಹಗಳನ್ನು ಬದಿಗೊತ್ತಿ ಶಾಂತಿ, ಸಮಾನತೆಯನ್ನು ಸಾರಲು ಮಂಗಳೂರಿನ ಆಲದ ಮರದಡಿ ನಡೆದ ಸರ್ವಧರ್ಮಗಳ ಇಫ್ತಾರ್​ ಮುಸ್ಸಂಜೆ ಗಮನ ಸೆಳೆಯಿತು. ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ ಅವರ ನೇತೃತ್ವದ ಸಹಕಾರ ನ್ಯಾಯ ಕೂಟದಿಂದ ಶಾಂತಿ ಸಮಾನತೆಗಾಗಿ ಇಫ್ತಾರ್ ಮುಸ್ಸಂಜೆ ಕಾರ್ಯಕ್ರಮ ಜರುಗಿತು.

ಈ ವಿಶೇಷ ಇಫ್ತಾರ್ ಮುಸ್ಸಂಜೆ ಕಾರ್ಯಕ್ರಮದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು, ಜೈನರು ಜೊತೆಗೂಡಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ವೇದಿಕೆಯಲ್ಲೇ ಮಗ್ರಿಬ್ ಬಾಂಗ್ ಕರೆ ಕೊಟ್ಟು ಅದರೊಂದಿಗೆ ಉಪವಾಸ ನಡೆಸುತ್ತಿರುವ ಮುಸ್ಲಿಮರು ವ್ರತ ತೊರೆದರೆ, ಇತರರು ಅವರೊಂದಿಗೆ ಭಾಗಿಯಾದರು. ನಾದ ಮಣಿನಾಲ್ಕೂರು ಅವರ ಭಾವೈಕ್ಯತೆ ಸಾರುವ ಕತ್ತಲ ಹಾಡುಗಳು‌ ಗಮನ ಸೆಳೆದವು.

ಕಾರ್ಯಕ್ರಮದಲ್ಲಿ ಮಾತನಾಡಿದ ಸುನ್ನಿ ಯುವಜನ ಸಂಘ ರಾಜ್ಯಾಧ್ಯಕ್ಷ ಡಾ.ಎಂ.ಎಸ್.ಎಂ. ಝೈನಿ ಕಾಮಿಲ್, ಇಸ್ಲಾಂ ಧರ್ಮದ ಬಗ್ಗೆ ಕೆಲವರಲ್ಲಿ ಅಪನಂಬಿಕೆ, ಮುಸ್ಲಿಮರ ಬಗ್ಗೆಯೂ ಅಸಹಿಷ್ಣುತೆ ಇದೆ. ಪರಸ್ಪರ ಅರ್ಥ ಮಾಡಿಕೊಂಡರೆ ಇಂತಹ ಅಪನಂಬಿಕೆ ದೂರವಾಗಿ, ಅಸಹಿಷ್ಣುತೆ ಕಡಿಮೆಯಾಗಬಹುದು ಎಂದರು.

ಓದಿ: ಅಕೌಂಟೆಂಟ್ ಕೊಲೆ ಪ್ರಕರಣಕ್ಕೆ ಟ್ವಿಸ್ಟ್​: ವಿವಾಹೇತರ ಸಂಬಂಧಕ್ಕಾಗಿ ಪತಿಯನ್ನೇ ಮುಗಿಸಿದ ಪತ್ನಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.