ಮಂಗಳೂರು: ನಾವು ಶಕ್ತರು, ಸಾಧಿಸಬಲ್ಲೆವು. ಆದರೆ, ಅನುಕಂಪ ಬೇಡ. ಅವಕಾಶ ನೀಡಿ ಎಂಬ ಭಿತ್ತಿ ಪತ್ರಗಳನ್ನು ಹಿಡಿದು ವಿಶೇಷಚೇತನರು ಜಾಥಾ ನಡೆಸಿದ್ರು.
ದೈಹಿಕವಾಗಿ ನ್ಯೂನತೆಗಳಿದ್ದರೂ ಅದೆಲ್ಲವನ್ನೂ ಮೆಟ್ಟಿ ನಿಂತು ಸಾಧಿಸುವ ಶಕ್ತಿ ನಮಗಿದೆ. ನಮ್ಮಲ್ಲಿನ ಪ್ರತಿಭೆ ಗುರುತಿಸಿ ಮುಖ್ಯವಾಹಿನಿಗೆ ಬರಲು ಅವಕಾಶ ನೀಡಿ ಎಂದು ಛಲದಿಂದ ಹೆಜ್ಜೆ ಹಾಕುತ್ತಿದ್ದಾರೆ.
ವಿಶ್ವವಿಕಲ ಚೇತನರ ದಿನದ ಪ್ರಯುಕ್ತ ವಿಶೇಷಚೇತನರ ಕುರಿತು ನಗರದ ಹಂಪನಕಟ್ಟೆ ವಿಶ್ವವಿದ್ಯಾಲಯ ಕಾಲೇಜಿನಿಂದ ಪುರಭವನದವರೆಗೆ ಜಾಗೃತಿ ಜಾಥಾ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯ ವಿಶೇಷಚೇತನ ಶಾಲೆಯ ನೂರಾರು ಮಕ್ಕಳು ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿದರು.
ವಿಶೇಷ ಶಿಕ್ಷಕರಿಗೆ ಸರ್ಕಾರ ನೀಡುತ್ತಿರುವ ಕನಿಷ್ಠ ಗೌರವ ಧನ ಸಾಕಾಗುವುದಿಲ್ಲ. ಅದನ್ನು ದ್ವಿಗುಣಗೊಳಿಸಬೇಕು ಎಂದು ವಿಶೇಷ ಶಿಕ್ಷಕರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.