ETV Bharat / city

ನಾಲ್ಕು ಮಕ್ಕಳ ತಂದೆ ನೇಣಿಗೆ ಶರಣು.. ಬೀದಿಗೆ ಬಿದ್ದ ಕುಟುಂಬ!

ಆರ್ಥಿಕ ಸಂಕಷ್ಟ, ಕೈತುಂಬಾ ಸಾಲ, ಕುಡಿತಕ್ಕೆ ದಾಸನಾಗಿದ್ದ ನಾಲ್ಕು ಮಕ್ಕಳ ತಂದೆ ಲಾಡ್ಜೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳೂರಿನ ಉಪ್ಪಿನಂಗಡಿಯಲ್ಲಿ ನಡೆದಿದೆ.

man committed suicide in Mangalore  Mangalore crime news  four children father suicide in Mangalore  ಮಂಗಳೂರಿನಲ್ಲಿ ಸಾಲಭಾದೆಗೆ ಬೇಸತ್ತು ವ್ಯಕ್ತಿ ಆತ್ಮಹತ್ಯೆ  ಮಂಗಳೂರು ಅಪರಾಧ ಸುದ್ದಿ  ಮಂಗಳೂರಿನಲ್ಲಿ ನಾಲ್ಕು ಮಕ್ಕಳ ತಂದೆ ನೇಣಿಗೆ ಶರಣು
ನಾಲ್ಕು ಮಕ್ಕಳ ತಂದೆ ನೇಣಿಗೆ ಶರಣು
author img

By

Published : Jan 28, 2022, 11:17 AM IST

ಉಪ್ಪಿನಂಗಡಿ: ಸಾಲಬಾಧೆಯಿಂದಾಗಿ ಆತ್ಮಹತ್ಯೆ ಮಾಡುವವರ ಸಂಖ್ಯೆ ಏರುತ್ತಿದ್ದು, ವಿಟ್ಲ ನಿವಾಸಿಯೊಬ್ಬರು ಉಪ್ಪಿನಂಗಡಿಯ ಲಾಡ್ಜ್‌ವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.

ಓದಿ: ಬಿಡಿಎ ಭ್ರಷ್ಟರಿಗೆ ಚಳಿ ಬಿಡಿಸಿದ ಖಾಕಿ: ಆರು ಮಂದಿ ಆರೋಪಿಗಳ ಬಂಧನ

ಮೂಲತಃ ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ ಅರಿಮೂಲೆ ನಿವಾಸಿ ಅಬ್ದುಲ್ ರಹಿಮಾನ್ ಅವರ ಪುತ್ರ ಮಹಮ್ಮದ್ ಶರೀಫ್ (37) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಇಳಂತಿಲ ಗ್ರಾಮದ ಮುರ ನಿವಾಸಿ ಮಹಿಳೆಯನ್ನು ವಿವಾಹವಾಗಿದ್ದು, ಈ ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ಪ್ರಸ್ತುತ ಪತ್ನಿ ಜತೆ ಉಪ್ಪಿನಂಗಡಿಯ ನೆಕ್ಕಿಲಾಡಿಯ ಬಾಡಿಗೆ ಮನೆಯಲ್ಲಿ ಅವರು ವಾಸವಾಗಿದ್ದರು.

ಜ. 25 ರಂದು ಬೆಳಗ್ಗೆ ಶರೀಫ್ ಉಪ್ಪಿನಂಗಡಿ ಲಾಡ್ಜ್‌ನಲ್ಲಿ ರೂಂ ಬಾಡಿಗೆಗೆ ಪಡೆದಿದ್ದರು. ಜ. 26ರಂದು ರೂಂ ಖಾಲಿ ಮಾಡುವುದಾಗಿ ತಿಳಿಸಿದ ಅವರು ರೂಮ್‌ನಿಂದ ಹೊರ ಬಾರದಿದ್ದಾಗ ಸಂಶಯಗೊಂಡ ಲಾಡ್ಜ್ ಮ್ಯಾನೇಜರ್ ರೂಂ ಬಾಗಿಲು ತಟ್ಟಿದ್ದಾರೆ.

ರೂಮ್‌ನಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಮ್ಯಾನೇಜರ್ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಬಾಗಿಲು ತೆರೆದ ವೇಳೆ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶರೀಫ್ ಶವ ಪತ್ತೆಯಾಗಿದೆ.

ಓದಿ: ಭಾರಿ ಕುಸಿತದ ಬಳಿಕ ಚೇತರಿಕೆ ಕಂಡ ಷೇರುಪೇಟೆ.. ನಿಟ್ಟುಸಿರು ಬಿಟ್ಟ ಹೂಡಿಕೆದಾರರು!

ಪೇಟಿಂಗ್​​​ ಕೆಲಸ ಮಾಡುತ್ತಿದ್ದ ಪತಿ ಆರ್ಥಿಕವಾಗಿ ಬಹಳ ಸಂಕಷ್ಟಕ್ಕೀಡಾಗಿದ್ದು, ಕಷ್ಟದ ಸಮಯದಲ್ಲಿ ಹಲವು ಮಂದಿಯಿಂದ ಕೈ ಸಾಲ ಸಹ ಪಡೆದುಕೊಂಡಿದ್ದರು.

ಇದರ ನಡುವೆ ತುಂಬಾ ತೊಂದರೆಗಳು ಎದುರಾಗಿ ಮದ್ಯಪಾನದ ಚಟ ಬೆಳೆಸಿಕೊಂಡಿದ್ದರು ಎಂದು ಪತ್ನಿ ಉಪ್ಪಿನಂಗಡಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.