ETV Bharat / city

ಮಂಗಳೂರು: ರಾಮ-ಲಕ್ಷ್ಮಣ ಜೋಡುಕರೆ ಕಂಬಳಕ್ಕೆ ಚಾಲನೆ - Rama Lakshman jodukare kambala

ಬಂಗ್ರ ಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ‌ ಕೃತಕವಾಗಿ ನಿರ್ಮಿಸಲಾಗಿರುವ 145 ಮೀ‌ ಉದ್ದದ ಜೋಡುಕರೆಯಲ್ಲಿ ಇಂದಿನಿಂದ ನಾಳೆ ಬೆಳಗ್ಗೆ 7 ಗಂಟೆಯವರೆಗೆ ರಾಮ-ಲಕ್ಷ್ಮಣ ಜೋಡುಕರೆ ಕಂಬಳ ನಡೆಯಲಿದೆ.

Drive To Rama Lakshman jodukare kambala
ರಾಮ-ಲಕ್ಷ್ಮಣ ಜೋಡುಕರೆ ಕಂಬಳಕ್ಕೆ ಚಾಲನೆ
author img

By

Published : Mar 6, 2021, 11:05 AM IST

ಮಂಗಳೂರು: ನಗರದ ಬಂಗ್ರ ಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ‌ ನಡೆಯುವ ನಾಲ್ಕನೇ ವರ್ಷದ ರಾಮ-ಲಕ್ಷ್ಮಣ ಜೋಡುಕರೆ 'ಮಂಗಳೂರು ಕಂಬಳ'ಕ್ಕೆ ಕಂಕನಾಡಿ ಬ್ರಹ್ಮಬೈದ್ಯರ್ಕಳ ಗರಡಿಯ ಅಧ್ಯಕ್ಷ ಚಿತ್ತರಂಜನ್ ರಾಸ್ ಇಂದು ಚಾಲನೆ ನೀಡಿದರು.

ರಾಮ-ಲಕ್ಷ್ಮಣ ಜೋಡುಕರೆ ಕಂಬಳಕ್ಕೆ ಚಾಲನೆ

ಕ್ಯಾ.ಬ್ರಿಜೇಶ್ ಚೌಟ ನೇತೃತ್ವದಲ್ಲಿ ನಡೆಯುವ ಈ ಕಂಬಳವು ಮಂಗಳೂರು ನಗರದೊಳಗೆ ನಡೆಯುವ ಏಕೈಕ ಕಂಬಳವೆಂದು ಹೆಗ್ಗಳಿಕೆ ಪಡೆದಿದೆ. ಬಂಗ್ರ ಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ‌ ಕೃತಕವಾಗಿ ನಿರ್ಮಿಸಲಾಗಿರುವ 145 ಮೀ‌. ಉದ್ದದ ಜೋಡುಕರೆಯಲ್ಲಿ ಇಂದಿನಿಂದ ನಾಳೆ ಬೆಳಗ್ಗೆ 7 ಗಂಟೆಯವರೆಗೆ ಕಂಬಳ ನಡೆಯಲಿದೆ. ಈ ಬಾರಿ ಆರು ವಿಭಾಗಗಳಲ್ಲಿ 120 ಜೊತೆ ಕೋಣಗಳು ಭಾಗವಹಿಸುವ ನಿರೀಕ್ಷೆಯಿದೆ.

ಓದಿ: ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಪುತ್ರ ಬಸವೇಶ್ ಅರೆಸ್ಟ್​

ಈ ವೇಳೆ ಮಂಗಳೂರು ಕಂಬಳದ ರೂವಾರಿ ಕ್ಯಾ.ಬ್ರಿಜೇಶ್ ಚೌಟ, ಕೂಳೂರು ಬೀಡಿನ ವಜ್ರಕುಮಾರ ಕರ್ಣಂತ್ತಾಯ ಬಲ್ಲಾಳ, ಕಸಪಾ ದ.ಕ.ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಶ್ರೀರಾಮಕೃಷ್ಣ ಮಿಷನ್ ನ ಏಕಗಮ್ಯಾನಂದ ಸ್ವಾಮೀಜಿ, ಕದ್ರಿ ಶ್ರೀ ಜೋಗಿ ಮಠದ ನಿರ್ಮಲಾನಂದ ಸ್ವಾಮೀಜಿ, ಕಟೀಲು‌ ಶ್ರೀ ದುರ್ಗಾಪರಮೇಶ್ವರಿ ದೇವಳದ ಆನುವಂಶಿಕ ಮುಕ್ತೇಸರ ಅನಂತಪದ್ಮನಾಭ ಆಸ್ರಣ್ಣ ಮತ್ತಿತರರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.