ಮಂಗಳೂರು/ಸುರತ್ಕಲ್: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೀಡಿದ ವಿಶೇಷ ಅನುದಾನದಡಿ ಕೋಡಿಕಲ್ ಬಂಗ್ರಕುಳೂರು 16 ನೇ ವಾರ್ಡ್ನಲ್ಲಿ 50 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಡಾ.ಭರತ್ ಶೆಟ್ಟಿ ವೈ ಚಾಲನೆ ನೀಡಿದರು.
ಕೋಡಿಕಲ್ನಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾರ್ಪೋರೇಷನ್ ಚುನಾವಣೆಯಲ್ಲಿ ಜನತೆ ವಿಶ್ವಾಸವಿಟ್ಟು ಮಂಗಳೂರು ಉತ್ತರದಲ್ಲಿ ಅತೀ ಹೆಚ್ಚು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಅವರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಅಭಿವೃದ್ಧಿ ಕೆಲಸಗಳನ್ನು ಹಂತಹಂತವಾಗಿ ಮಾಡಲಾಗುವುದು. ಮಹಾತ್ಮ ಗಾಂಧಿ ನಗರ ಯೋಜನೆಯಡಿ ಅಂದಾಜು 2 ಕೋಟಿ ರೂ. ಮೀಸಲಿರಿಸಿ ಈ ಭಾಗದ ಎರಡು ವಾರ್ಡ್ಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.
3 ಲಕ್ಷ ರೂ. ವೆಚ್ಚದಲ್ಲಿ 10 ನೇ ಬಿ ಕ್ರಾಸ್ ಜೀವನ್ ಅಮೀನ್ ಮನೆಯ ಹತ್ತಿರದ ರಸ್ತೆ ಅಭಿವೃದ್ಧಿ, 3 ಲಕ್ಷ ರೂ. ವೆಚ್ಚದಲ್ಲಿ ಭಟ್ರಬೆಟ್ಟು ಯಾದವ ಕೋಟ್ಯಾನ್ ಮನೆ ಬಳಿ ಚರಂಡಿ ದುರಸ್ತಿ, 3.5 ಲಕ್ಷ ರೂ.ವೆಚ್ಚದಲ್ಲಿ ನಾಗಬ್ರಹ್ಮಸ್ಥಾನ ಬಳಿ ಚರಂಡಿ ಅಭಿವೃದ್ಧಿ, 3.5 ಲಕ್ಷ ರೂ. ವೆಚ್ಚದಲ್ಲಿ ಕೋಡಿಕಲ್ ಅಂಗನವಾಡಿ ಬಳಿ ತಡೆಗೋಡೆ, ಭಟ್ರಬೆಟ್ಟು ಬಳಿ 3.5 ಲಕ್ಷ ರೂ.ವೆಚ್ಚದಲ್ಲಿ ರಸ್ತೆ ಅಗಲೀಕರಣ ಮುಂತಾದ ಕಾಮಗಾರಿಗಳು ನಡೆಯಲಿದೆ ಎಂದರು.
ಈ ಸಂದರ್ಭ ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕುಮಾರ್, ಕೃಷ್ಣಾಪುರ ಮಂಡಲ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಗೋಪಾಲ್ ಕೋಟ್ಯಾನ್, ಮನೋಹರ್, ಹರಿ ಪ್ರಸಾದ್, ಜೀವನ್ ಅಮೀನ್, ಉಮೇಶ್ ಕುಂಜಿರಾಮಣ್ಣ, ಕಿಶೋರ್ ಬಾಬು, ಮ.ನ.ಪಾ ಸದಸ್ಯರು ಮನೋಜ್, ಹರೀಶ್ ಶೆಟ್ಟಿ, ರಮಾನಾಥ್ ಭಟ್, ಸದಾನಂದ ಅಂಚನ್, ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.