ETV Bharat / city

ಮಂಗಳೂರು-ನವದೆಹಲಿ ನೇರ ವಿಮಾನಯಾನ ಇಂದಿನಿಂದ ಆರಂಭ : ವಾರದಲ್ಲಿ ನಾಲ್ಕು ದಿನ ಸೇವೆ - ಮಂಗಳೂರು ಮತ್ತು ನವದೆಹಲಿ ವಿಮಾನದ ವೇಳಾಪಟ್ಟಿ

ಕೊರೊನಾ ಕಾರಣಕ್ಕೆ ಸ್ಥಗಿತಗೊಂಡಿದ್ದ ಮಂಗಳೂರು ಮತ್ತು ನವದೆಹಲಿ ನಡುವಿನ ವಿಮಾನಯಾನ ಸೇವೆ ಮತ್ತೆ ಆರಂಭವಾಗಿದ್ದು, ವಾರದಲ್ಲಿ ನಾಲ್ಕು ದಿನ ವಿಮಾನ ಸೇವೆ ಪ್ರಯಾಣಿಕರಿಗೆ ಸಿಗಲಿದೆ..

direct-flight-to-mangaluru-to-new-delhi-starts-from-today
ಮಂಗಳೂರು-ನವದೆಹಲಿ ನೇರ ವಿಮಾನಯಾನ ಇಂದಿನಿಂದ ಆರಂಭ: ವಾರದಲ್ಲಿ ನಾಲ್ಕು ದಿನ ಸೇವೆ
author img

By

Published : Mar 28, 2022, 5:06 PM IST

ಮಂಗಳೂರು : ಕೊರೊನಾ ಕಾರಣದಿಂದಾಗಿ ರದ್ದಾಗಿದ್ದ ಮಂಗಳೂರು ಮತ್ತು ನವದೆಹಲಿ ನಡುವಿನ ವಿಮಾನಯಾನ ಸೇವೆ ಮತ್ತೆ ಆರಂಭವಾಗಿದೆ. ಇಂಡಿಗೋ ಏರ್​​ಲೈನ್ಸ್​​ನ ವಿಮಾನ ವಾರದಲ್ಲಿ ನಾಲ್ಕು ದಿನ ಅಂದರೆ ಭಾನುವಾರ, ಸೋಮವಾರ, ಬುಧವಾರ, ಶುಕ್ರವಾರ ಇರಲಿದೆ. ಮಂಗಳೂರಿನಿಂದ ನವದೆಹಲಿಗೆ ತಲುಪಬೇಕಿದ್ದರೆ ಈ ಮೊದಲು ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್​ಗೆ ತೆರಳಿ ಅಲ್ಲಿಂದ ಬೇರೆ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಈಗ ಆರಂಭವಾಗಿರುವ ವಿಮಾನ ಪುಣೆ ಮೂಲಕ ನವದೆಹಲಿ ತಲುಪಲಿದೆ.

ಮಂಗಳೂರಿನಿಂದ ಮುಂಜಾನೆ 2.45ಕ್ಕೆ ಟೇಕಾಪ್ ಆಗುವ ವಿಮಾನ, ಮುಂಜಾನೆ 4.20ಕ್ಕೆ ಪುಣೆಯಲ್ಲಿ ಲ್ಯಾಂಡ್ ಆಗಲಿದೆ. 35 ನಿಮಿಷ ವಿಶ್ರಾಂತಿ ಬಳಿಕ ಪುಣೆಯಿಂದ ಹೊರಡುವ ವಿಮಾನ ಬೆಳಗ್ಗೆ 6.55ಕ್ಕೆ ನವದೆಹಲಿ ತಲುಪಲಿದೆ. ಇದೇ ವೇಳೆ ನವದೆಹಲಿಯಿಂದ ರಾತ್ರಿ 9.05ಕ್ಕೆ ಟೇಕಾಪ್ ಆಗುವ ವಿಮಾನ ರಾತ್ರಿ 11.05ಕ್ಕೆ ಪುಣೆ ತಲುಪಿ ಅಲ್ಲಿ 40 ನಿಮಿಷ ಕಾಲ ತಂಗಿ 11.45ಕ್ಕೆ ಹೊರಟು 1.20ಕ್ಕೆ ಮಂಗಳೂರು ತಲುಪಲಿದೆ.

ಇಂದು ಮಂಗಳೂರಿನಿಂದ ನವದೆಹಲಿಗೆ ಹೊರಟ ವಿಮಾನದಲ್ಲಿ 125 ಪ್ರಯಾಣಿಕರು ತೆರಳಿದರೆ, ನವದೆಹಲಿಯಿಂದ ಮಂಗಳೂರಿಗೆ ಬಂದ ವಿಮಾನದಲ್ಲಿ 85 ಮಂದಿ ಪ್ರಯಾಣಿಕರು ಆಗಮಿಸಿದ್ದಾರೆ. ಈ ಮಾರ್ಗದಲ್ಲಿ ವಿಮಾನಯಾನ ಪುನಾರಂಭವಾದ ಪ್ರಯುಕ್ತ ನವದೆಹಲಿಯಿಂದ ಮಂಗಳೂರಿಗೆ‌ ಆಗಮಿಸಿದ ಮೊದಲ ವಿಮಾನಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು.

ಇದನ್ನೂ ಓದಿ: 40% ಕಮಿಷನ್ ವಿಷಯದ ಚರ್ಚೆಗೆ ರಾಜ್ಯ ಸರ್ಕಾರ ಹೆದರುತ್ತಿದೆ: ಅಜಯ್ ಸಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.