ಮಂಗಳೂರು: ಕೊರೊನಾ ಕಾರಣದಿಂದ ಹೇರಲಾದ ಲಾಕ್ಡೌನ್ನಿಂದ ಮಂಗಳೂರಿನಲ್ಲಿ ಬಾಲ ಭಿಕ್ಷುಕರ ಸಂಖ್ಯೆ ತೀವ್ರ ಇಳಿಮುಖವಾಗಿದೆ. ಕೋವಿಡ್ಗೂ ಮುನ್ನ ಚೈಲ್ಡ್ಲೈನ್ಗೆ ಬಾಲ ಭಿಕ್ಷುಕರ ಕುರಿತು ಬರುತ್ತಿದ್ದ ಸಾಕಷ್ಟು ಕರೆಗಳು ಈಗ ಕಡಿಮೆಯಾಗಿವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಕ್ಕಳ ಭಿಕ್ಷಾಟನೆ ತಡೆಯಲು ಪಡಿ ಎಂಬ ಎನ್ಜಿಒ ಸಂಸ್ಥೆ, ಚೈಲ್ಡ್ಲೈನ್ ದಕ್ಷಿಣ ಕನ್ನಡ ಮತ್ತು ಮಕ್ಕಳ ಕಲ್ಯಾಣ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಲಾಕ್ಡೌನ್ ಸಂದರ್ಭದಲ್ಲಿ ಅಂತಹ ಯಾವುದೇ ದೂರುಗಳು ದಾಖಲಾಗಿಲ್ಲ. ಕೋವಿಡ್ ನಿರ್ಬಂಧ ಸಡಿಲಿಕೆಯಾದ ನಂತರ ಮೂರು ದೂರು ಮಾತ್ರ ಬಂದಿವೆ. ಅದು ಕೂಡ ಹೆತ್ತವರೊಂದಿಗೆ ಭಿಕ್ಷೆ ಬೇಡುತ್ತಿದ್ದಾಗ ಎಂದು ಚೈಲ್ಡ್ಲೈನ್ ನಿರ್ದೇಶಕ ರೆನ್ನಿ ಡಿಸೋಜ ಮಾಹಿತಿ ನೀಡಿದ್ದಾರೆ.
ಲಾಕ್ಡೌನ್ನಲ್ಲಿ ನಿರ್ಗತಿಕರಿಗೆ, ವಲಸೆ ಬಂದವರಿಗೆ ಸರ್ಕಾರ ಮತ್ತು ಸಂಘ ಸಂಸ್ಥೆಗಳು ವಸತಿ ಊಟದ ವ್ಯವಸ್ಥೆ ಕಲ್ಪಿಸಿದ ಪರಿಣಾಮ ಭಿಕ್ಷಾಟನೆ ಕಡಿಮೆಯಾಗಿದೆ ಎನ್ನಲಾಗಿದೆ. ಸದ್ಯ ನಗರ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಮಕ್ಕಳ ಭಿಕ್ಷಾಟನೆ ಪ್ರಕರಣಗಳು ವರದಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.