ETV Bharat / city

ವೆನ್ಲಾಕ್ ಆಸ್ಪತ್ರೆ ಕೋವಿಡ್ ವಾರ್ಡ್​ಗೆ​ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

5 ವೆಂಟಿಲೇಟರ್ ಸಾಮರ್ಥ್ಯದ ಐಸಿಯು ಅನ್ನು 50 ವೆಂಟಿಲೇಟರ್ ಐಸಿಯುವಾಗಿ ಪರಿವರ್ತಿಸಬೇಕು ಎಂದು ವೆನ್ಲಾಕ್​ನ ವೈದ್ಯಾಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು.

DC KV Rajendra
DC KV Rajendra
author img

By

Published : Apr 29, 2021, 11:00 PM IST

ಮಂಗಳೂರು: ನಗರದ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಕೋವಿಡ್ ವಾರ್ಡ್​ಗೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ ವಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.‌

ಈ ಸಂದರ್ಭ ಕೋವಿಡ್ ಸೋಂಕಿತರೊಂದಿಗೆ ಮಾತನಾಡಿದ ಅವರು, ಚಿಕಿತ್ಸೆ, ಮೂಲ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದು ಯೋಗಕ್ಷೇಮ ವಿಚಾರಿಸಿದರು. ಬಳಿಕ ನಡೆದ ಸಭೆಯಲ್ಲಿ ಉಪಸ್ಥಿತಿ ಇದ್ದು, ಆಸ್ಪತ್ರೆಯ ಕುಂದು ಕೊರತೆಗಳನ್ನು ವಿಚಾರಿಸಿದರು.

ಈ ಸಂದರ್ಭ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಮೊದಲ ಮಹಡಿಯಲ್ಲಿನ ಡಯಾಲಿಸೀಸ್ ಕೊಠಡಿ ಸಹಿತ ಸಸ್ಪೆಕ್ಡ್ ವಾರ್ಡ್​​ ಅನ್ನು ಹಳೆಯ ಕಟ್ಟಡಕ್ಕೆ ಸ್ಥಳಾಂತರ ಮಾಡಬೇಕು. 15 ವೆಂಟಿಲೇಟರ್ ಸಾಮರ್ಥ್ಯದ ಐಸಿಯುವನ್ನು 50 ವೆಂಟಿಲೇಟರ್ ಐಸಿಯುವಾಗಿ ಪರಿವರ್ತಿಸಬೇಕು ಎಂದು ವೆನ್ಲಾಕ್​ನ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಜೊತೆಗೆ ಅವಶ್ಯಕತೆ ಇದ್ದಲ್ಲಿ 50 ಸ್ಟಾಫ್ ನರ್ಸ್​ಗಳ ನೇಮಕಾತಿ ನಡೆಸುವಂತೆ ಆದೇಶಿಸಿದರು. ರೋಗ ಲಕ್ಷಣಗಳಿಲ್ಲದ, ರೋಗಲಕ್ಷಣಗಳಿಂದ ಗುಣ ಮುಖರಾಗಿರುವ ಕೊರೊನಾ ಸೋಂಕಿತರನ್ನು 10 ದಿನಗಳು ಪೂರ್ಣಗೊಂಡ ಬಳಿಕ ಇಎಸ್ಐ ಆಸ್ಪತ್ರೆಗೆ ಸ್ಥಳಾಂತರಿಸಲು ಜಿಲ್ಲಾಧಿಕಾರಿಯವರು ಸೂಚನೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.