ಮಂಗಳೂರು: 1837ರಲ್ಲಿ ಮಂಗಳೂರು ಕ್ರಾಂತಿ ದಂಗೆಯ ಮೂಲಕ ಕೆದಂಬಾಡಿ ರಾಮಯ್ಯ ಗೌಡ ನೇತೃತ್ವದ ದಂಡು ಬ್ರಿಟಿಷ್ ಸೇನೆಯನ್ನು ಹಿಮ್ಮೆಟ್ಟಿಸಿತು. ಈ ವಿಚಾರ ಇತಿಹಾಸದಲ್ಲಿ ಉಲ್ಲೇಖವಾಗಿಲ್ಲ ಎಂದಾದರೆ ದೇಶದ ಸ್ವಾತಂತ್ರ್ಯದ ಇತಿಹಾಸವೇ ಪೂರ್ತಿಯಾಗದಂತೆ ಎಂದು ಮಾಜಿ ಮುಖ್ಯಮಂತ್ರಿ ಸಿಎಂ ಡಿ.ವಿ. ಸದಾನಂದ ಗೌಡ ಅಭಿಪ್ರಾಯಪಟ್ಟಿದ್ದಾರೆ.
ನಗರದ ಬಾವುಟಗುಡ್ಡೆ ಠಾಗೋರ್ ಪಾರ್ಕ್ನಲ್ಲಿ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯ ಅನಾವರಣಕ್ಕೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಚರಿತ್ರೆಗಳಲ್ಲಿ ಕೆಲವೊಂದು ವಿಚಾರಗಳು ದಾಖಲಾಗುವುದೇ ಇಲ್ಲ. ಮಂಗಳೂರು ಕ್ರಾಂತಿಯಂತಹ ವಿಚಾರಗಳು ಇತಿಹಾಸದಲ್ಲಿ ಉಲ್ಲೇಖವಾಗಬೇಕಾದ ಅನಿವಾರ್ಯತೆಯಿದೆ.
ಆದರೆ, ಸಿಪಾಯಿ ದಂಗೆಗಿಂತಲೇ 20ವರ್ಷ ಮೊದಲು ಬ್ರಿಟಿಷ್ ದಾಸ್ಯದಿಂದ ಜನರನ್ನು ಮುಕ್ತರನ್ನಾಗಿಸಬೇಕು ಎಂದು ಕೆದಂಬಾಡಿ ರಾಮಯ್ಯ ಗೌಡ ಹಾಗೂ ಅವರ ತಂಡ ಮಾಡಿರುವ ಹೋರಾಟ ದೇಶದ ಇತಿಹಾಸದಲ್ಲಿ ದಾಖಲಾಗದಿರುವುದು ಬಹಳ ದುರದೃಷ್ಟಕರ ಎಂದು ಹೇಳಿದರು.
ಇದನ್ನೂ ಓದಿ: ಸಿಗರೇಟ್ ಶೋಕಿಗಾಗಿ.. ಮಾಜಿ ಸಿಎಂ ಮನೆ ಸಮೀಪದಲ್ಲೇ ಕಳ್ಳರ ಕೈಚಳಕ