ETV Bharat / city

ದೋಣಿ ದುರಂತ: ಮೃತ ಕುಟುಂಬಸ್ಥರಿಗೆ ಬೋಟ್ ಮಾಲೀಕರ ಸಂಘದಿಂದ ತಲಾ 1 ಲಕ್ಷ ರೂ‌. ಪರಿಹಾರ

ಡಿಸೆಂಬರ್​ 9ರಂದು ಸಂಜೆ 4ರ ಹೊತ್ತಿಗೆ ಮೃತ ಮೀನುಗಾರರ ಕುಟುಂಬವನ್ನು ನೇರವಾಗಿ ಭೇಟಿಯಾಗಿ ಅವರಿಗೆ ಸಾಂತ್ವನ ಜತೆಗೆ ತಲಾ ಒಂದು ಲಕ್ಷ ರೂ. ಪರಿಹಾರ ಧನವನ್ನು ಸಂಘದಿಂದ ನೀಡಲಾಗುತ್ತದೆ. ಮಂಗಳವಾರ ಮಂಗಳೂರಿನ ಧಕ್ಕೆಯಲ್ಲಿರುವ ಮತ್ಸ್ಯಗಂಧಿ ಸಭಾಭವನದಲ್ಲಿ ನಡೆದ ಪರ್ಸಿನ್‌ ಬೋಟು ಮಾಲೀಕರ ಸಮಿತಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ.

Mangaluru boat accident
ಮಂಗಳೂರಲ್ಲಿ ದೋಣಿ ದುರಂತ
author img

By

Published : Dec 10, 2020, 4:40 AM IST

ಮಂಗಳೂರು: ಇತ್ತೀಚೆಗೆ ನಗರದ ಬಂದರ್ ಸಮೀಪದ ಅಳಿವೆಬಾಗಿಲಿನಲ್ಲಿ ನಡೆದ ದೋಣಿ ದುರಂತದಲ್ಲಿ ಮೃತಪಟ್ಟ ಮೀನುಗಾರ ಕುಟುಂಬಕ್ಕೆ ತಲಾ ಒಂದು ಲಕ್ಷ ರೂ. ಪರಿಹಾರ ನೀಡಲು ಕರ್ನಾಟಕ ಪರ್ಸಿನ್‌ ಬೋಟು ಮಾಲೀಕರ ಸಂಘ ನಿರ್ಧರಿಸಿದೆ.

ಮುಳುಗು ತಜ್ಞರಿಗೆ ಗೌರವಧನ, ಸನ್ಮಾನ ಮಾಡಲು ಕರ್ನಾಟಕ ಪರ್ಸಿನ್‌ ಬೋಟು ಮಾಲೀಕರ ಸಂಘ ನಿರ್ಧಾರ ಮಾಡಿದೆ. ಮಂಗಳವಾರ ಮಂಗಳೂರಿನ ಧಕ್ಕೆಯಲ್ಲಿರುವ ಮತ್ಸ್ಯಗಂಧಿ ಸಭಾಭವನದಲ್ಲಿ ನಡೆದ ಪರ್ಸಿನ್‌ ಬೋಟು ಮಾಲೀಕರ ಸಮಿತಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಮಂಗಳೂರು ದೋಣಿ ದುರಂತ: ಮೃತರ ಕುಟುಂಬಕ್ಕೆ ತಲಾ 6 ಲಕ್ಷ ರೂ. ಪರಿಹಾರ ವಿತರಣೆ

ಡಿಸೆಂಬರ್​ 9ರಂದು ಸಂಜೆ 4ರ ಹೊತ್ತಿಗೆ ಮೃತ ಮೀನುಗಾರರ ಕುಟುಂಬವನ್ನು ನೇರವಾಗಿ ಭೇಟಿಯಾಗಿ ಅವರಿಗೆ ಸಾಂತ್ವನ ಜತೆಗೆ ತಲಾ ಒಂದು ಲಕ್ಷ ರೂ. ಪರಿಹಾರ ಧನವನ್ನು ಸಂಘದಿಂದ ನೀಡಲಾಗುತ್ತದೆ. ಜೊತೆಗೆ ಮೃತಪಟ್ಟ ದೇಹಗಳನ್ನು ಹುಡುಕಾಟ ಮಾಡುವಲ್ಲಿ ನೆರವು ನೀಡಿದ ಮುಳುಗುತಜ್ಞರ ತಂಡಕ್ಕೆ ಗೌರವಧನ ನೀಡುವ ಕೆಲಸವನ್ನು ಮಾಡಲಾಗುತ್ತದೆ. ಈ ಬಳಿಕ ಸಾರ್ವಜನಿಕ ಸಭೆಯಲ್ಲಿ ಈ ತಂಡವನ್ನು ಸನ್ಮಾನಿಸುವ ಬಗ್ಗೆ ಸಮಿತಿಯ ಸಭೆಯಲ್ಲಿ ನಿರ್ಧರಿಸಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.