ಮಂಗಳೂರು: ಇಲ್ಲಿನ ಸಮುದ್ರ ತೀರದಲ್ಲಿ ಬೋಟ್ ಇಂಜಿನ್ನಲ್ಲಿ ಉಂಟಾದ ದೋಷದಿಂದ ಅಪಾಯಕ್ಕೆ ಸಿಲುಕಿದ್ದ 10 ಮಂದಿ ತಮಿಳುನಾಡು ಮೀನುಗಾರರನ್ನು ರಕ್ಷಿಸಲಾಗಿದೆ.
ಓದಿ: BSY ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ: ಸಂಸದ ಪ್ರತಾಪ್ ಸಿಂಹ
ತಮಿಳುನಾಡಿನ ಲಾರ್ಡ್ ಆಫ್ ಓಷಿಯನ್ ಬೋಟ್ ನಲ್ಲಿ ಮೀನುಗಾರಿಕೆಗೆ ಬಂದಿದ್ದ ವೇಳೆ, ಮಂಗಳೂರು ಸಮೀಪ ಅದರ ಇಂಜಿನ್ ನಲ್ಲಿ ದೋಷ ಕಾಣಿಸಿಕೊಂಡಿತ್ತು. ಇಂಜಿನ್ ದೋಷದಿಂದ ಬೋಟ್ ನಲ್ಲಿದ್ದ 10 ಮೀನುಗಾರರು ಅಪಾಯಕ್ಕೆ ಸಿಲುಕಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ರಾಜಧೂತ್ ಹಡಗಿನಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. 10 ಮೀನುಗಾರರನ್ನು ರಕ್ಷಿಸಿದ ಸಿಬ್ಬಂದಿ, ಇಂಜಿನ್ ದೋಷಕ್ಕೊಳಗಾದ ಬೋಟನ್ನು ನವಮಂಗಳೂರು ಬಂದರ್ಗೆ ಎಳೆದು ತಂದು ಮೀನುಗಾರಿಕಾ ಇಲಾಖೆಯ ಸ್ವಾಧೀನಕ್ಕೆ ನೀಡಿದ್ದಾರೆ.