ETV Bharat / city

ಎರಡು ವಿಧಾನಸಭೆ, ನಾಲ್ಕು ವಿಧಾನ ಪರಿಷತ್ ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ: ಕಟೀಲ್​ - ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​

ಈಗಾಗಲೇ ನಡೆದಿರುವ ಎರಡು ವಿಧಾನಸಭೆ ಹಾಗೂ ನಾಲ್ಕೂ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ. ಮುಂದೆ ಎರಡು ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳು ಬರಲಿದೆ. ಆ ಸ್ಥಾನಗಳನ್ನು ಗೆಲ್ಲುವ ಸಂಕಲ್ಪವನ್ನು ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾಡುತ್ತೇವೆ ಎಂದು ನಳಿನ್ ಕುಮಾರ್ ಕಟೀಲ್​ ಹೇಳಿದ್ದಾರೆ.

bjp-president-nalin-kumar-kateel-statement-about-elections-result
ಎರಡು ವಿಧಾನಸಭೆ, ನಾಲ್ಕು ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ: ಕಟೀಲ್​
author img

By

Published : Nov 5, 2020, 5:23 PM IST

ಮಂಗಳೂರು: ಶಿರಾ, ಆರ್​.ಆರ್​.ನಗರ ಹಾಗೂ ನಾಲ್ಕು ವಿಧಾನ ಪರಿಷತ್ ಚುನಾವಣೆಗಳು ಮುಗಿದಿದ್ದು, ಈ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎರಡು ವಿಧಾನಸಭೆ, ನಾಲ್ಕು ವಿಧಾನ ಪರಿಷತ್ ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ: ಕಟೀಲ್​
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂದೆ ಎರಡು ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳು ಬರಲಿವೆ. ಆ ಸ್ಥಾನಗಳನ್ನು ಗೆಲ್ಲುವ ಸಂಕಲ್ಪವನ್ನು ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾಡುತ್ತೇವೆ. ಜೊತೆಗೆ ಮುಂದೆ ಬರಲಿರುವ ಪಂಚಾಯತ್ ಚುನಾವಣೆಯಲ್ಲಿ ನಮ್ಮೆಲ್ಲ ಪದಾಧಿಕಾರಿಗಳ ಸಹಕಾರದಿಂದ 80% ಬಿಜೆಪಿ ಗೆಲುವು ಸಾಧಿಸಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಸಂಕಲ್ಪದಂತೆ ಮುಂದಿನ ಚುನಾವಣೆಯಲ್ಲಿ ಅರ್ಧ ಸ್ಥಾನವನ್ನು ಬಿಟ್ಟು ಕೊಡಲಾರೆವು. ಎಲ್ಲಾ ಸ್ಥಾನವನ್ನು ಬಿಜೆಪಿ ಗೆಲ್ಲುವ ರೀತಿಯಲ್ಲಿ ಸಂಘಟನಾ ಶಕ್ತಿಯನ್ನು ಬಲಪಡಿಸುತ್ತೇವೆ ಎಂದರು.‌ ಹಿಂದೆ ಕರಾವಳಿಯ ಸಂಘಟನೆಯ ಕಲೆಯನ್ನು ಇಡೀ ರಾಜ್ಯಾದ್ಯಂತ ವಿಸ್ತಾರ ಮಾಡಲಾಗುತ್ತದೆ ಎಂದು ಹೇಳಿದ್ದೆ. ಇಂದು ಇಡೀ ರಾಜ್ಯದ ಸಂಘಟನಾತ್ಮಕವಾದ ಎಲ್ಲಾ ಜಿಲ್ಲೆಗಳು, 311 ಮಂಡಲಗಳಲ್ಲಿ ನಮ್ಮೆಲ್ಲಾ ಕಾರ್ಯಗಳು ವಿಸ್ತಾರವಾಗಿ ಮತಗಟ್ಟೆಗಳು ಪೂರ್ತಿಯಾಗಿ ಪೇಜ್ ಪ್ರಮುಖ್ ಹಾಗೂ ಪಂಚ ರತ್ನ ಎಂಬ ಹೊಸ ಕಲ್ಪನೆಗಳಿಗೆ ಶಕ್ತಿ ತುಂಬಿದೆ. ಮುಂದಿನ ದಿನಗಳಲ್ಲಿ ಪ್ರತೀ ತಿಂಗಳಿಗೆ ಒಂದು ಬಾರಿ ಪ್ರತಿ ಜಿಲ್ಲೆಗಳಲ್ಲಿ ಬಿಜೆಪಿಯಿಂದ ವಿಶೇಷ ಸಭೆ ನಡೆಸುವ ಸಂಕಲ್ಪ ಕೈಗೊಂಡಿದ್ದೇವೆ.

ಅಲ್ಲದೆ, ಪದಾಧಿಕಾರಿಗಳ ಸಭೆಯನ್ನು 15 ದಿನಕ್ಕೊಂದು ಬಾರಿ, ಕೋರ್ ಕಮಿಟಿ ಸಭೆಯನ್ನು ತಿಂಗಳಿಗೊಂದು ಬಾರಿ, ಪ್ರಧಾನ ಕಾರ್ಯದರ್ಶಿಗಳ ಸಭೆಯನ್ನು 8 ದಿನಕ್ಕೊಂದು ಬಾರಿ ಮಾಡಲಾಗುತ್ತದೆ. ಹೀಗೆ ಸಂಘಟನೆಯನ್ನು ಬಲಪಡಿಸಿಕೊಂಡು ಮತಗಟ್ಟೆ ಮೂಲಕ ಗೆಲ್ಲುವ ಗುರಿಯನ್ನು ಬಿಜೆಪಿ ಹೊಂದಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.