ETV Bharat / city

ಚುನಾವಣಾ ರಾಜಕೀಯದಿಂದ ನಿವೃತ್ತಿ ‌ಘೋಷಿಸಿದ ಮಾಜಿ ‌ಸಚಿವ ಅಭಯಚಂದ್ರ ಜೈನ್ - Political retirement

ಮುಂದಿನ ಚುನಾವಣೆಗಳಲ್ಲಿ ಯುವಕರು ಸ್ಪರ್ಧಿಸಲು ಹೆಚ್ಚು ಅವಕಾಶ ನೀಡಬೇಕು. ಹಾಗಾಗಿ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಮಾಜಿ ‌ಸಚಿವ ಅಭಯಚಂದ್ರ ಜೈನ್ ಹೇಳಿದ್ದಾರೆ,

Abhayachandra Jain
ಅಭಯಚಂದ್ರ ಜೈನ್
author img

By

Published : Jul 2, 2021, 3:29 PM IST

ಮಂಗಳೂರು: ಯುವಕರಿಗೆ ಆದ್ಯತೆ ನೀಡುವ ಕಾರಣ ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಮಾಜಿ ‌ಸಚಿವ ಅಭಯಚಂದ್ರ ಜೈನ್ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.

ಮಂಗಳೂರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಭಯಚಂದ್ರ ಜೈನ್

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ನನಗಿನ್ನು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಕಾಂಗ್ರೆಸ್ ಗೆಲ್ಲಬೇಕೆಂದರೆ ಯುವಕರಿಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು. ನಮ್ಮ ರಾಜಕಾರಣಿಗಳು ಇದನ್ನು ಮರೆತಿರುವುದರಿಂದಲೇ ಕಾಂಗ್ರೆಸ್​ಗೆ ಭಾರೀ ಏಟು ಬಿದ್ದಿದೆ. ಆದ್ದರಿಂದ ದೇಶದಲ್ಲಿ ಕಾಂಗ್ರೆಸ್ ಉಳಿಯಬೇಕಾದರೆ ನಾವು ಈ ರೀತಿಯ ಪ್ರಯತ್ನ ಮಾಡಬೇಕು ಎಂದರು.

ಮುಂದಿನ ಚುನಾವಣೆಗಳಲ್ಲಿ ಆದಷ್ಟು ಯುವಕರಿಗೆ ಆದ್ಯತೆ ನೀಡಿ, ಕಳೆದ ಚುನಾವಣೆಯಲ್ಲಿ ದ.ಕ ಜಿಲ್ಲೆಯಲ್ಲಿ ಬಿಜೆಪಿಗರು ಯುವಕರಿಗೆ ಸ್ಥಾನ ನೀಡಿರುವುದರಿಂದ ಹೆಚ್ಚಿನ ಕಡೆಗಳಲ್ಲಿ ಗೆಲ್ಲಲು ಸಾಧ್ಯವಾಯಿತು. ಆದ್ದರಿಂದ ಯುವಕರು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಅಭಯಚಂದ್ರ ಜೈನ್ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.