ಮಂಗಳೂರು: ಗೆಳೆಯನೊಬ್ಬನ ಚಿಕಿತ್ಸೆಗೆ ಬೇಕಾದ ಹಣಕ್ಕಾಗಿ ವೇಷ ಧರಿಸಿ ಸ್ನೇಹಿತರ ತಂಡ ಹಣ ಸಂಗ್ರಹಿಸುತ್ತಿದ್ದು, ಪ್ರಶಂಸೆಗೆ ಪಾತ್ರವಾಗಿದೆ.
ಮಂಗಳೂರಿನ ಅಡ್ಯಾರ್ನ ಮನೋಜ್ ಎಂಬ ಯುವಕ ತನ್ನ ಗೆಳೆಯನ ಮನೆಯ ಕೆಲಸಕ್ಕೆಂದು ಹೋಗಿದ್ದ ವೇಳೆ ಗೋಡೆ ಬಿದ್ದು ಬೆನ್ನುಮೂಳೆಗೆ ಪೆಟ್ಟಾಗಿತ್ತು. ಇದರಿಂದಾಗಿ ಎರಡು ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಇದಕ್ಕಾಗಿ ಸುಮಾರು 7 ಲಕ್ಷ ರೂ. ಖರ್ಚಾಗಿತ್ತು. ಆ ಬಳಿಕ ಆತನಿಗೆ ಅನ್ನನಾಳದ ಸಮಸ್ಯೆ ತಲೆದೋರಿ ಚಿಕಿತ್ಸೆಗೆ 5 ಲಕ್ಷ ರೂ. ಖರ್ಚಾಗಿದೆ. ಈ ಹಣವನ್ನು ಹೊಂದಿಸಲು ಇವರ ಗೆಳೆಯರ ಬಳಗ ಮುಂದೆ ಬಂದಿದೆ. ಮನೋಜ್ ಅವರಿಗೆ ಪೆಟ್ಟಾಗಿ ಆಸ್ಪತ್ರೆ ಸೇರಿದಾಗಿನಿಂದಲೂ ಅವರಿಗೆ ಹಣ ಒಗಿಸುವ ಪ್ರಯತ್ನ ಮಾಡಿದ್ದಾರೆ.
ಗೆಳೆಯರೆಲ್ಲ ಸೇರಿ ಸ್ನೇಹ ಬಂಧು ಎಂಬ ತಂಡವೊಂದನ್ನು ಕಟ್ಟಿ ಹಣ ಸಂಗ್ರಹಕ್ಕಿಳಿದಿದ್ದಾರೆ. ಇಂದು ಸಹ ಕುಡುಪು ಕ್ಷೇತ್ರದಲ್ಲಿ ಸಂಭ್ರಮದಿಂದ ನಡೆದ ಷಷ್ಠಿ ಉತ್ಸವದಲ್ಲಿ ಭವತಿ ಭಿಕ್ಷಾಂ ದೇಹಿ ಎಂದು ಹಣ ಸಂಗ್ರಹಿಸಿದ್ದಾರೆ. ಇಬ್ಬರು ವಿಚಿತ್ರ ವೇಷವನ್ನು ಧರಿಸಿ ತಂಡದೊಂದಿಗೆ ಹಣ ಸಂಗ್ರಹ ಮಾಡಿದ್ದಾರೆ. ಗೆಳೆಯನ ಚಿಕಿತ್ಸೆಗಾಗಿ ಸ್ನೇಹಿತರು ಮಾಡಿದ ಈ ಪ್ರಯತ್ನಕ್ಕೆ ಕುಡುಪು ಕ್ಷೇತ್ರಕ್ಕೆ ಬಂದ ಭಕ್ತರು ಸ್ಪಂದಿಸಿ, ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಸೋನಿಯಾ ಜನ್ಮದಿನ: ಯುವ ಕಾಂಗ್ರೆಸ್ನಿಂದ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ