ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತೆಗೆ ಇರುವ ಡಾಗ್ ಸ್ಕ್ವಾಡ್ಗೆ ಹೊಸ ಶ್ವಾನವೊಂದು ಸೇರ್ಪಡೆಯಾಗಿದೆ.
![Mangalore Airport Dog Squad](https://etvbharatimages.akamaized.net/etvbharat/prod-images/14303440_sdgrdgh.jpg)
ಸಿಐಎಸ್ಎಫ್ ಏವಿಯೇಶನ್ ಸೆಕ್ಯುರಿಟಿ ಗ್ರೂಪ್ನ ಅಧೀನದಲ್ಲಿರುವ ಡಾಗ್ ಸ್ಕ್ವಾಡ್ಗೆ ಗೋಲ್ಡಿ ಎಂಬ ಹೆಸರಿನ ಶ್ವಾನವನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ. ಗೋಲ್ಡಿ ಶ್ವಾನ ಗೋಲ್ಡನ್ ರಿಟ್ರೀವರ್ ಜಾತಿಗೆ ಸೇರಿದ ಶ್ವಾನವಾಗಿದೆ. ಒಂದು ವರ್ಷ ಪ್ರಾಯದ ಗಂಡು ಶ್ವಾನವನ್ನು ರಾಂಚಿಯ ಶ್ವಾನ ತರಬೇತಿ ಶಾಲೆಯಲ್ಲಿ ಆರು ತಿಂಗಳ ಕಾಲ ತರಬೇತಿ ನೀಡಿ ಮಂಗಳೂರು ವಿಮಾನ ನಿಲ್ದಾಣದ ಭದ್ರತೆಗೆ ನಿಯೋಜಿಸಲಾಗಿದೆ.
ಇದನ್ನೂ ಓದಿ: ಮಾಜಿ ಸಿಎಂ ಬಿಎಸ್‌ವೈ ಭೇಟಿ ಮಾಡಿ ಆಶೀರ್ವಾದ ಪಡೆದ ಸಿಎಂ ಬೊಮ್ಮಾಯಿ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಶ್ವಾನದಳದಲ್ಲಿ ಜ್ಯಾಕ್, ಬ್ರೂನೋ, ಜೂಲಿ ಎಂಬ ಶ್ವಾನಗಳು ಕರ್ತವ್ಯ ನಿರ್ವಹಿಸುತ್ತಿವೆ. ಹೊಸ ಶ್ವಾನ ಸೇರ್ಪಡೆಯೊಂದಿಗೆ ಈಗ ನಾಲ್ಕು ಶ್ವಾನಗಳು ವಿಮಾನ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ