ಮಂಗಳೂರು: ಬಹ್ರೇನ್ ಹಾಗೂ ಮಸ್ಕತ್‌ನಲ್ಲಿ ಸಿಲುಕಿದ್ದ 334 ಅನಿವಾಸಿ ಕನ್ನಡಿಗರು ಎರಡು ವಿಮಾನಗಳ ಮೂಲಕ ಭಾನುವಾರ ಸಂಜೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದಾರೆ.
ವಂದೇ ಭಾರತ್ ಯೋಜನೆಯಡಿ ಈ ಎರಡೂ ವಿಮಾನಗಳು ಮಂಗಳೂರಿಗೆ ಆಗಮಿಸಿವೆ. ಬಹ್ರೇನ್ನಿಂದ ಸಂಜೆ 4:40ಕ್ಕೆ ಆಗಮಿಸಿರುವ ವಿಮಾನದಲ್ಲಿ 107 ಪುರುಷರು ಹಾಗೂ 49 ಮಹಿಳೆಯರು ಸೇರಿದಂತೆ 156 ಪ್ರಯಾಣಿಕರು ಭಾರತ ತಲುಪಿದ್ದಾರೆ. ಮಸ್ಕತ್‌ನಿಂದ ಸಂಜೆ 5:30ಕ್ಕೆ ಆಗಮಿಸಿರುವ ವಿಮಾನದಲ್ಲಿ 140 ಪುರುಷರು, 34 ಮಹಿಳೆಯರು ಹಾಗೂ 4 ಮಕ್ಕಳು ಸೇರಿದಂತೆ ಒಟ್ಟು 178 ಪ್ರಯಾಣಿಕರಿದ್ದರು.
ಈ ಎಲ್ಲಾ ಪ್ರಯಾಣಿಕರಿಗೆ ಜಿಲ್ಲಾಡಳಿತದ ವತಿಯಿಂದ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ ಎಂದು ವಿಮಾನ ನಿಲ್ದಾಣದ ನೋಡಲ್ ಅಧಿಕಾರಿ ಯತೀಶ್ ಉಳ್ಳಾಲ್ ತಿಳಿಸಿದ್ದಾರೆ.