ETV Bharat / city

ಬೀಡಿ ಕಾಂಟ್ರಾಕ್ಟ್​​ದಾರರಿಗೆ 1000 ಬೀಡಿಗೆ 2.25 ರೂ. ಹೆಚ್ಚಳ: ಮಹಮ್ಮದ್ ರಫಿ - ನಿನ್ನೆ ಸಭೆ ಕರೆದ ಆಡಳಿತ ವರ್ಗ ಕಮಿಷನ್ ಹೆಚ್ಚುಗೊಳಿಸುವ ಬಗ್ಗೆ ಚರ್ಚೆ

ಹೆಚ್ಚುವರಿ ಕಮಿಷನ್‌ಗಾಗಿ ವಿವಿಧ ಬೀಡಿ ಕಾಂಟ್ರಾಕ್ಟ್‌ದಾರರು ಸಲ್ಲಿಸಿದ ಮನವಿಗೆ ಸ್ಪಂದನೆ ನೀಡಿದ ಆಡಳಿತ ವರ್ಗ 1000 ಬೀಡಿಗೆ 2.25 ರೂ. ಹೆಚ್ಚಳ ಮಾಡಿದೆ. ಇದು ಸಂಘಟನೆಯ ನ್ಯಾಯಯುತ ಹೋರಾಟಕ್ಕೆ ಸಂದ ಜಯ ಎಂದು ಬೀಡಿ ಕಾಂಟ್ರಾಕ್ಟ್‌ದಾರ ಮಹಮ್ಮದ್ ರಫಿ ಹೇಳಿದರು.

Kn_Mng_06_Beedi_Contractor_Byte_Script_KA10015
ಬೀಡಿ ಕಾಂಟ್ರಾಕ್ಟ್​​ದಾರರಿಗೆ 1000 ಬೀಡಿಗೆ 2.25 ರೂ. ಹೆಚ್ಚಳ: ಮಹಮ್ಮದ್ ರಫಿ
author img

By

Published : Mar 9, 2020, 10:35 PM IST

ಮಂಗಳೂರು : ಹೆಚ್ಚುವರಿ ಕಮಿಷನ್‌ಗಾಗಿ ವಿವಿಧ ಬೀಡಿ ಕಾಂಟ್ರಾಕ್ಟ್‌ದಾರರು ಸಲ್ಲಿಸಿದ ಮನವಿಗೆ ಸ್ಪಂದನೆ ನೀಡಿದ ಆಡಳಿತ ವರ್ಗ 1000 ಬೀಡಿಗೆ 2.25 ರೂ. ಹೆಚ್ಚಳ ಮಾಡಿದೆ. ಇದು ಸಂಘಟನೆಯ ನ್ಯಾಯಯುತ ಹೋರಾಟಕ್ಕೆ ಸಂದ ಜಯ ಎಂದು ಬೀಡಿ ಕಾಂಟ್ರಾಕ್ಟ್‌ದಾರ ಮಹಮ್ಮದ್ ರಫಿ ಹೇಳಿದರು.

ಬೀಡಿ ಕಾಂಟ್ರಾಕ್ಟ್​​ದಾರರಿಗೆ 1000 ಬೀಡಿಗೆ 2.25 ರೂ. ಹೆಚ್ಚಳ.. ಮಹಮ್ಮದ್ ರಫಿ

ಪ್ರತಿ ವರ್ಷ ಆಡಳಿತ ವರ್ಗ ಎಪ್ರಿಲ್ 1ರಿಂದ ಹೆಚ್ಚುವರಿ ಕಮಿಷನ್ ಜಾರಿಗೊಳಿಸುತ್ತಿತ್ತು. ಆದರೆ, 2019-20ರಂದು ಮೂರು ಬಾರಿ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಹೆಚ್ಚುವರಿ ಕಮಿಷನ್ ನೀಡಿರಲಿಲ್ಲ‌. ಈ ಹಿನ್ನೆಲೆಯಲ್ಲಿ ಬೀಡಿ ಕಾಂಟ್ರಾಕ್ಟ್‌ದಾರರ ಸಂಘಟನೆಯ ಸರ್ವ ಸದಸ್ಯರ ಸಭೆ ನಡೆಸಿ 2020 ಫೆಬ್ರವರಿ 29ರೊಳಗೆ ಹೆಚ್ಚುವರಿ ಕಮಿಷನ್ ನೀಡದಿದ್ದಲ್ಲಿ 2020 ಮಾರ್ಚ್ 7ರಿಂದ ಕಂಪನಿ ನೀಡುವ ತಂಬಾಕು ನಿರಾಕರಿಸಿ ಕೆಲಸ ಸ್ಥಗಿತಗೊಳಿಸಲು ನಿರ್ಧರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಒಂದು ದಿನದ ಮುಷ್ಕರ ಯಶಸ್ವಿಯಾಗಿತ್ತು ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ನಿನ್ನೆ ಸಭೆ ಕರೆದ ಆಡಳಿತ ವರ್ಗ ಕಮಿಷನ್ ಹೆಚ್ಚುಗೊಳಿಸುವ ಬಗ್ಗೆ ಚರ್ಚೆ ನಡೆಸಿತು. ಮೂರು ಸುತ್ತಿನ ಮಾತುಕತೆ ನಡೆಸಿದ ಬಳಿಕ 1000 ಬೀಡಿಗೆ 20.25 ರೂ. ನೊಂದಿಗೆ 2.25 ರೂ. ಹೆಚ್ಚುವರಿಯಾಗಿ ನೀಡುವುದಾಗಿ ಘೋಷಣೆ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.