ETV Bharat / city

ಕಾರು-ಬೈಕ್ ಡಿಕ್ಕಿಯಾಗಿ ಮದುಮಗ ಸೇರಿ ಇಬ್ಬರು ಸಾವು : ವಿಧಿಯಾಟಕ್ಕೆ ಮದುವೆ ಬದಲು ಮಸಣ ಸೇರಿದ ವರ - ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮ

ಬೈಕ್-ಕಾರು ಡಿಕ್ಕಿಯಾದ ಪರಿಣಾಮ ಮದುಮಗ ಸೇರಿ ಇಬ್ಬರು ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಜೇರಟಗಿ ಬಳಿ ನಡೆದಿದೆ..

kalburgi
ಕಲಬುರಗಿ
author img

By

Published : Apr 8, 2022, 7:16 AM IST

ಕಲಬುರಗಿ : ಮದುವೆಯ ಆಮಂತ್ರಣ ಪತ್ರಿಕೆ ಕೊಡಲು ಬೈಕ್​​ನಲ್ಲಿ ಹೋಗುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ ಮದುಮಗ ಹಾಗೂ ಆತನ ಸ್ನೇಹಿತ ಸಾವನ್ನಪ್ಪಿದ ಘಟನೆ ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದ ಬಳಿ ನಡೆದಿದೆ. ಯಡ್ರಾಮಿ ತಾಲೂಕು ಕೋಣಶಿರಸಗಿ ಗ್ರಾಮದ ದೇವೇಂದ್ರಪ್ಪ (30) ಹಾಗೂ ವಸ್ತಾರಿ ಗ್ರಾಮದ ಗುರುರಾಜ್ (30) ಎಂಬುವರು ಮೃತ ದುರ್ದೈವಿಗಳು.

ದೇವಿಂದ್ರಪ್ಪ ಅವರ ಮದುವೆ ನಿಶ್ಚಯವಾಗಿತ್ತು. ಹೀಗಾಗಿ, ಸಂಬಂಧಿಕರಿಗೆ ಆಮಂತ್ರಣ ಪತ್ರಿಕೆ ಕೊಡಲೆಂದು ಇಬ್ಬರು ಬೈಕ್ ಮೇಲೆ ಜೇರಟಗಿ ಕಡೆಗೆ ಹೊರಟ್ಟಿದ್ದಾಗ ಯಮರೂಪದ ಕಾರು ಬಂದು ಬೈಕ್‌ಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.

Road Accident at kalburgi
ವಿಧಿಯಾಟಕ್ಕೆ ಮದುವೆ ಬದಲು ಮಸಣ ಸೇರಿದ ವರ

ವಿಜಯಪುರ ಮೂಲದ ಕಾರೊಂದು ವೇಗವಾಗಿ ಮತ್ತೊಂದು ವಾಹನ ಓವರ್‌ಟೇಕ್ ಮಾಡಲು ಹೋಗಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಇಬ್ಬರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಘಟನೆಯಲ್ಲಿ ಓರ್ವ ಯವಕನ ದೇಹ ಛಿದ್ರವಾಗಿದೆ. ಕಾರಿನಲ್ಲಿದ್ದವರಿಗೂ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೆ ಕಾರು ಚಾಲಕನ ನಿರ್ಲಕ್ಷ್ಯವೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಕುರಿತು ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಟ್ರ್ಯಾಕ್ಟರ್‌ ಪಲ್ಟಿ-ಮಹಿಳೆ ಸಾವು : ಯಡ್ರಾಮಿ ಹೊರವಲಯದ ಕ್ಯಾನಲ್​​ನಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಮಹಿಳೆಯೋರ್ವಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಕಮಲಾಬಾಯಿ ಪವಾರ (40) ಎಂಬುವರು ಮೃತರು. ಮಹಿಳೆಯ ಇಬ್ಬರು ಮಕ್ಕಳು ಹಾಗೂ ಚಾಲಕ ಮೂವರಿಗೂ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತದೆ. ಘಟನಾ ಸ್ಥಳಕ್ಕೆ ಯಡ್ರಾಮಿ ಪೊಲೀಸರು ಭೇಟಿ ನೀಡಿ ಮೃತ ದೇಹ ಹೊರ ತೆಗೆದಿದ್ದಾರೆ. ಈ ಸಂಬಂಧ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

kalburgi
ಟ್ರ್ಯಾಕ್ಟರ್ ಪಲ್ಟಿ- ಮಹಿಳೆ ಸಾವು

ಇದನ್ನೂ ಓದಿ: ಇಸ್ರೇಲ್​ನಲ್ಲಿ ಭಯೋತ್ಪಾದನಾ ದಾಳಿ : ಇಬ್ಬರು ಮೃತ, 8 ಮಂದಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.