ಕಲಬುರಗಿ : ಕಲಬುರಗಿ ನಗರದಾದ್ಯಂತ ಕಳೆದ ಒಂದು ವರ್ಷದಲ್ಲಿ ಮನೆ ಕಳ್ಳತನ, ಸರಗಳ್ಳತನ, ಬೈಕ್ ಕಳ್ಳತನ ಸೇರಿ 271 ಅಪರಾಧ ಪ್ರಕರಣ ದಾಖಲಾಗಿದ್ದವು. 271 ಅಪರಾಧ ಪ್ರಕರಣಗಳ ಬೆನ್ನತ್ತಿದ್ದ ನಗರ ಪೊಲೀಸರು 125 ಪ್ರಕರಣಗಳನ್ನ ಬೇಧಿಸಿ, 1 ಕೋಟಿ 29 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನ ಕಳೆದುಕೊಂಡ ವಾರಸುದಾರರಿಗೆ ವಾಪಸ್ ನೀಡಿದ್ದಾರೆ.
ಕಲಬುರಗಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 1369 ಗ್ರಾಂ. ಚಿನ್ನಾಭರಣ, ಬೈಕ್, ಆಟೋ ಮೊಬೈಲ್ ಸೇರಿ ಒಟ್ಟು ಒಂದು ಕೋಟಿ 29 ಲಕ್ಷ ರೂ. ಮೌಲ್ಯದ ವಸ್ತುಗಳನ್ನ ರಿಕವರಿ ಮಾಡಿದ್ದಾರೆ. ಚಿನ್ನಾಭರಣ, ಹಣ ಕಳೆದುಕೊಂಡ ವಾರಸುದಾರರಿಗೆ ಕಲಬುರಗಿಯ ಡಿಎಆರ್ ಮೈದಾನದಲ್ಲಿ ಖುದ್ದು ಡಿಸಿಪಿ ಸ್ವತ್ತುಗಳನ್ನು ಹಿಂದುರುಗಿಸಿದ್ದಾರೆ.
125 ಪ್ರಕರಣಕ್ಕೆ ಸಂಬಂಧಿಸಿದಂತೆ 150ಕ್ಕೂ ಹೆಚ್ಚು ಆರೋಪಿಗಳನ್ನ ಬಂಧಿಸಲಾಗಿದೆ. ಕಲಬುರಗಿ ನಗರದಲ್ಲಿ ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳು ಹಚ್ಚತ್ತಿರುವ ಹಿನ್ನೆಲೆಯಲ್ಲಿ ಅಲರ್ಟ್ ಆದ ಪೊಲೀಸರು ಪ್ರತಿನಿತ್ಯ ಒಬ್ಬ ಎಸಿಪಿ ಸೇರಿ ಹಲವು ಪೊಲೀಸ್ ಅಧಿಕಾರಿಗಳು ನೈಟ್ ರೌಂಡ್ಸ್ ನಲ್ಲಿ ಇರಲಿದ್ದಾರೆ. ಜೊತೆಗೆ ಸಾರ್ವಜನಿಕರು ಕೂಡ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದ್ರೆ ತಕ್ಷಣ ಪೊಲೀಸರ ಗಮನಕ್ಕೆ ತನ್ನಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.