ETV Bharat / city

ಸಿನಿಮಾ ನೋಡುತ್ತಲೇ ಬಿಕ್ಕಿ ಬಿಕ್ಕಿ ಅತ್ತ ಅಪ್ಪು ಅಭಿಮಾನಿ.. VIDEO - ಸಿನಿಮಾ ನೋಡುತ್ತಲೇ ಕಣ್ಣೀರಿಟ್ಟ ಅಪ್ಪು ಅಭಿಮಾನಿ

ನಟ ಸಾರ್ವಭೌಮ ಪುನೀತ್​​ ರಾಜ್​ಕುಮಾರ್​ ಅಭಿನಯದ ಕೊನೆಯ ಸಿನಿಮಾ ಜೇಮ್ಸ್​ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಅಪ್ಪು ಎಂಟ್ರಿಯಾಗುತ್ತಿದ್ದಂತೆ ತಮ್ಮ ನೆಚ್ಚಿನ ನಟ ಇಲ್ಲದ್ದನ್ನು ನೆನೆದು ಚಿತ್ರಮಂದಿರದಲ್ಲೇ ಅಭಿಮಾನಿಗಳು ಭಾವುಕರಾಗಿದ್ದಾರೆ. ಕಲಬುರಗಿಯ ಚಿತ್ರಮಂದಿರವೊಂದರಲ್ಲಿ ಅಭಿಮಾನಿಯೊಬ್ಬ ಬಿಕ್ಕಿ ಬಿಕ್ಕಿ ಅತ್ತು ದುಃಖಿತನಾಗಿದ್ದಾನೆ.

Appu fan cried while watching movie
ಸಿನಿಮಾ ನೋಡುತ್ತಲೇ ಕಣ್ಣೀರಿಟ್ಟ ಅಪ್ಪು ಅಭಿಮಾನಿ
author img

By

Published : Mar 17, 2022, 11:27 AM IST

ಕಲಬುರಗಿ: ಮರೆಯಾದ ಮಾಣಿಕ್ಯ ಪವರ್ ಸ್ಟಾರ್‌ ಪುನೀತ್ ರಾಜಕುಮಾರ್ ನಟನೆಯ ಕೊನೆ ಚಿತ್ರ ಜೇಮ್ಸ್‌ ಇಂದು ತೆರೆ ಕಂಡಿದ್ದು, ಅಭಿಮಾನಿಗಳು ಭವ್ಯ ಸ್ವಾಗತ ಕೋರಿದ್ದಾರೆ. ಸಿನಿಮಾ ನೋಡುವಾಗ ತಮ್ಮ ನೆಚ್ಚಿನ ನಟ ಪುನೀತ್ ರಾಜ್​ಕುಮಾರ್​ ಇಲ್ಲದ್ದನ್ನು ನೆನೆದು ಅಭಿಮಾನಿಗಳು ಸಿನಿಮಾ ನೋಡುತ್ತಲೇ ಭಾವುಕರಾಗಿದ್ದಾರೆ.

ಸಿನಿಮಾ ನೋಡುತ್ತಲೇ ಕಣ್ಣೀರಿಟ್ಟ ಅಪ್ಪು ಅಭಿಮಾನಿ

ಅಸಂಖ್ಯಾತ ಅಪ್ಪು ಅಭಿಮಾನಿಗಳು ಜೇಮ್ಸ್ ಖದರ್ ನೋಡಲು ಕಾತುರದಿಂದ ಆಗಮಿಸಿದ್ದಾರೆ. ಕೆಲವರು ಸಿನಿಮಾ ನೋಡುವಾಗ ಭಾವುಕರಾದರೆ, ಇನ್ನೂ ಕೆಲವರು ಚಿತ್ರ ಮಂದಿರಲ್ಲಿಯೇ ಕಣ್ಣೀರು ಹಾಕಿದರು. ಕಲಬುರಗಿ ನಗರದ ಸಂಗಮ ಚಿತ್ರಮಂದಿರದಲ್ಲಿ ಅಭಿಮಾನಿಯೊಬ್ಬ ಸಿನಿಮಾ ನೋಡುತ್ತಲೇ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಚಿತ್ರದಲ್ಲಿ ಪುನೀತ್​ ರಾಜ್​ಕುಮಾರ್​ ಎಂಟ್ರಿ ಆಗುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತು ಭಾವುಕರಾದರು.

ಇದನ್ನು ಓದಿ:ಬೆಳಗಾವಿ: ಪ್ರೀತಿಯ ಅಪ್ಪುಗಾಗಿ 17ನೇ ಸೀಟ್​ ಬುಕ್ ಮಾಡಿದ ಅಭಿಮಾನಿ

ನೆಚ್ಚಿನ ನಟ ಅಪ್ಪು ಅಭಿನಯದ ಕೊನೆಯ ಚಿತ್ರ ಜೇಮ್ಸ್ ನೋಡಲು ಅಭಿಮಾನಿಗಳು ನಸುಕಿನ ಜಾವವೇ ಚಿತ್ರಮಂದಿರಕ್ಕೆ ಆಗಮಿಸಿದ್ದಾರೆ. ನಗರದ ಶೆಟ್ಟಿ ಮಲ್ಟಿ ಫ್ಲೆಕ್ಸ್​, ಸಂಗಮ, ತ್ರಿವೇಣಿ, ಮೀರಜ್ ಚಿತ್ರಮಂದಿಗಳಲ್ಲಿ ಜೇಮ್ಸ್ ಪ್ರದರ್ಶನ ಕಾಣುತ್ತಿದೆ. ಚಿತ್ರಮಂದಿರಗಳ ಮುಂದೆ ಅಪ್ಪು ಬೃಹತ್ ಕಟೌಟ್, ಫ್ಲೆಕ್ಸ್​, ಬ್ಯಾನರ್​ಗಳು ರಾರಾಜಿಸುತ್ತಿವೆ. ಬೆಳಗ್ಗೆ ಫಸ್ಟ್ ಶೋಗೆ ಪುನಿತ್ ಅವರ ಕಟೌಟ್​ಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು ಸರದಿ ಸಾಲಿನಲ್ಲಿ ನಿಂತು ಟಿಕೇಟ್ ಖರೀದಿ ಮಾಡಿ ಚಿತ್ರ ವೀಕ್ಷಣೆ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.