ಕಲಬುರಗಿ: ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಪೊಲೀಸ್ ಇಲಾಖೆ ಸಿಬ್ಬಂದಿಗೆ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ರಕ್ಷಾ ಕವಚಗಳನ್ನು ವಿತರಿಸಿದ್ದಾರೆ.
ಮಾರಣಾಂತಿಕ ಕೊರೊನಾ ವಿರುದ್ಧ ಹಗಲಿರುಳು ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿ ಬೆನ್ನಿಗೆ ನಿಲ್ಲುವುದು ನಮ್ಮ ಕರ್ತವ್ಯವಾಗಿದೆ. ಈ ರೋಗಕ್ಕೆ ದೇಶದಲ್ಲಿಯೇ ಮೊದಲ ಸಾವಾಗಿದ್ದು ನಮ್ಮ ಕಲಬುರಗಿಯಲ್ಲಿ. ಆ ನಂತರದಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತಂದ ನಿಯಮಗಳಿಂದಾಗಿ ರೋಗ ವ್ಯಾಪಕವಾಗಿ ಹಬ್ಬದಂತೆ ನಿಯಂತ್ರಿಸಲಾಯಿತು. ಈ ಕಾರ್ಯದಲ್ಲಿ ಪೊಲೀಸ್ ಇಲಾಖೆಯ ಪಾತ್ರ ಮಹತ್ವದ್ದಾಗಿದ್ದು, ಸಿಬ್ಬಂದಿ ಹಗಲಿರುಳು ಶ್ರಮಿಸಿ ಕಲಬುರಗಿ ಜಿಲ್ಲೆ, ಅದರಲ್ಲೂ ಪ್ರಮುಖವಾಗಿ ನಗರವ್ಯಾಪ್ತಿಯ ಪ್ರಮುಖ ಪ್ರದೇಶಗಳಲ್ಲಿ ನಾಕಾಬಂದಿ ಹಾಕಿ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ.
ತಮ್ಮ ಜೀವದ ಹಂಗು ತೊರೆದು ಕೊರೊನಾ ಮಹಾಮಾರಿ ವಿರುದ್ಧ ಸೆಣಸುತ್ತಿರುವ ಪೊಲೀಸ್ ಇಲಾಖೆಯ ಸಿಬ್ಬಂದಿಗೆ ರಕ್ಷಣಾ ಸಲಕರಣೆಗಳು ಅಗತ್ಯವಿದ್ದು, ಈ ನಿಟ್ಟಿನಲ್ಲಿ ತಾವು ಅವರಿಗೆ ಬೇಕಾಗುವ ಸಾಮಗ್ರಿಗಳನ್ನು ವಿತರಿಸುತ್ತಿರಯವುದಾಗಿ ತಿಳಿಸಿದರು.
ರಕ್ಷಣಾ ಕವಚಗಳಾದ 50- ಪಿಪಿಇ ಕಿಟ್ಸ್, (PPE KITS), 100-ಸ್ಯಾನಿಟೈಸರ್ (500 ml), 400- ಫೇಸ್ ಶೀಲ್ಡ್, 2000- ಕೈಗವಸುಗಳು, 2500-ಸರ್ಜಿಕಲ್ ಮಾಸ್ಕ್ಗಳನ್ನು ಹಸ್ತಾಂತರಿಸಿದರು.