ETV Bharat / city

ಬಿಜೆಪಿಯಲ್ಲಿ ಅಸಮಾಧಾನ ಇರುವುದು ನಿಜ: ಸಚಿವ ಕೆ.ಎಸ್​.ಈಶ್ವರಪ್ಪ - Karnataka political developments

ಪಕ್ಷದಲ್ಲಿ ಅಸಮಾಧಾನ ಇರುವುದು ನಿಜ, ಆ ಕಾರಣಕ್ಕಾಗಿಯೇ ಪ್ರತ್ಯೇಕ ಸಭೆ ನಡೆಸಿದ್ದರು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

minister-kseshwarappa-reaction-on-bjp-political-crisis
ಸಚಿವ ಕೆ.ಎಸ್​.ಈಶ್ವರಪ್ಪ
author img

By

Published : Jun 5, 2020, 5:19 PM IST

ಕಲಬುರಗಿ: ನಮ್ಮ ಪಕ್ಷದಲ್ಲಿ ಅಸಮಾಧಾನ ಇರುವುದು ಸತ್ಯ. ಆದ್ದರಿಂದಲೇ ಕೆಲವರು ಸಭೆ ಸೇರಿದ್ದರು ಅನ್ನೋದನ್ನು ನಾನು ನೇರವಾಗಿ ಹೇಳಬಲ್ಲೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಸಚಿವ ಕೆ.ಎಸ್​.ಈಶ್ವರಪ್ಪ

ಕಲಬುರಗಿಯ ಹೊನ್ನಕಿರಣಗಿ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಯಾರೂ ಸನ್ಯಾಸಿಗಳಲ್ಲ. ಪ್ರತಿಯೊಬ್ಬರೂ ಸ್ಥಾನಮಾನ ಕೇಳುವುದು ಸಹಜ. ಅದನ್ನು ನಮ್ಮ ನಾಯಕರು ಬಗೆಹರಿಸುತ್ತಾರೆ. ನಮ್ಮ ಸರ್ಕಾರ ಮೂರು ವರ್ಷ ಅವಧಿ ಪೂರ್ಣಗೊಳಿಸುವುದು ಖಚಿತ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.