ETV Bharat / city

ವಾಲ್ಮೀಕಿ ನಾಯಕ ಪ್ರಾಮಾಣಿಕತೆ, ನಿಷ್ಠೆಗೆ ಹೆಸರಾದವರು: ಸಚಿವ ಕೆ.ಎಸ್​. ಈಶ್ವರಪ್ಪ - Former MLA Valmiki nayaka

ವಾಲ್ಮೀಕಿ ನಾಯಕ ಅವರು ಮೂರು ದಶಕಗಳಿಂದ ಬಿಜೆಪಿ ಪಕ್ಷ ಕಟ್ಟಿ ಬೆಳೆಸುವಲ್ಲಿ ಶ್ರಮಿಸಿದವರು. ಪ್ರಾಮಾಣಿಕತೆ, ನಿಷ್ಠೆಗೆ ಹೆಸರಾದವರು. ಅತ್ಯಂತ ತಳಮಟ್ಟದಿಂದ ಬಂದಂತಹ ಹೋರಾಟಗಾರ. ಅವರ ಅಕಾಲಿಕ ನಿಧನ ತುಂಬಾ ನೋವುಂಟು ಮಾಡಿದೆ ಎಂದು ಕೆ.ಎಸ್​.ಈಶ್ವರಪ್ಪ ಸಂತಾಪ ವ್ಯಕ್ತಪಡಿಸಿದರು.

Minister KS Eshwarappa
ವಾಲ್ಮೀಕಿ ನಾಯಕ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಈಶ್ವರಪ್ಪ
author img

By

Published : Mar 20, 2021, 1:40 PM IST

ಕಲಬುರಗಿ: ಮಾಜಿ ಶಾಸಕ ವಾಲ್ಮೀಕಿ ನಾಯಕ ಪಕ್ಷನಿಷ್ಠೆಗೆ ಹೆಸರಾದವರು. ತಾವು ಕೂಡ ಸಾಮಾನ್ಯ ಕಾರ್ಯಕರ್ತರಂತೆ ಪಕ್ಷಕಟ್ಟಲು ಶ್ರಮಿಸಿದವರು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್​. ಈಶ್ವರಪ್ಪ ಹೇಳಿದರು.

ವಾಲ್ಮೀಕಿ ನಾಯಕ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಈಶ್ವರಪ್ಪ

​ಹೃದಯಾಘಾತದಿಂದ ನಿಧನರಾದ ವಾಲ್ಮೀಕಿ ನಾಯಕ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಬಳಿಕ ಮಾತನಾಡಿದ ಅವರು, ವಾಲ್ಮೀಕಿ ನಾಯಕ ಅವರು ಮೂರು ದಶಕಗಳಿಂದ ಬಿಜೆಪಿ ಪಕ್ಷ ಕಟ್ಟಿ ಬೆಳೆಸುವಲ್ಲಿ ಶ್ರಮಿಸಿದವರು. ಪ್ರಾಮಾಣಿಕತೆ, ನಿಷ್ಠೆಗೆ ಹೆಸರಾದವರು. ಅತ್ಯಂತ ತಳಮಟ್ಟದಿಂದ ಬಂದಂತಹ ಹೋರಾಟಗಾರ. ಅವರ ಅಕಾಲಿಕ ನಿಧನ ತುಂಬಾ ನೋವುಂಟು ಮಾಡಿದೆ ಎಂದು ಸಂತಾಪ ವ್ಯಕ್ತಪಡಿಸಿದರು.

ಸಂಸದ ಉಮೇಶ್ ಜಾಧವ್, ಮಾಜಿ ಸಚಿವ ಸುನೀಲ್ ವಲ್ಲಾಪುರಿ, ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ ಸೇರಿದಂತೆ ಇತರರು ಅಂತಿಮ ದರ್ಶನ ಪಡೆದು, ನಾಯಕ ಅವರ ಕುಟುಂಬಕ್ಕೆ ಸಾಂತ್ವನ ತಿಳಿಸಿದರು.

ಓದಿ: ಚಿತ್ತಾಪುರ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ವಾಲ್ಮೀಕಿ ನಾಯಕ ನಿಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.