ETV Bharat / city

ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ಗೆ ಮಸಿ ಬಳಿದು ಮತ್ತೆ ಎಂಇಎಸ್​ ಉದ್ಧಟತನ - ಸಾರಿಗೆ ಬಸ್ ತಡೆದು ಎಂಇಎಸ್​ ಪುಂಡರಿಂದ ಅನುಚಿತ ವರ್ತನೆ

ಎಂಇಎಸ್ ಕಿಡಿಗೇಡಿಗಳ ಅಟ್ಟಹಾಸ ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದಲ್ಲಿ ಮುಂದುವರೆದಿದೆ. ಎಂಇಎಸ್ ಕಾರ್ಯಕರ್ತರು ಕಲ್ಯಾಣ ಕರ್ನಾಟಕದ ಸಾರಿಗೆ ಬಸ್ ತಡೆದು, ಬಸ್​ ಮೇಲೆ ಜೈ ಶಿವಾಜಿ ಎಂದು ಬರೆದು ಘೋಷಣೆಗಳನ್ನು ಕೂಗಿದ್ದಾರೆ.

ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ಗೆ ಮಸಿ ಬಳೆದು ಮತ್ತೆ ಪುಂಡಾಟಿಕೆ ತೋರಿದ ಎಂಇಎಸ್
author img

By

Published : Dec 21, 2021, 10:10 AM IST

Updated : Dec 21, 2021, 1:59 PM IST

ಕಲಬುರಗಿ:‌ ಮಹಾರಾಷ್ಟ್ರದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಕಾರ್ಯಕರ್ತರ ಅಟ್ಟಹಾಸ ಮುಂದುವರೆದಿದೆ. ಕಲ್ಯಾಣ ಕರ್ನಾಟಕದ ಸಾರಿಗೆ ಬಸ್ ತಡೆದು, ಕಪ್ಪು ಮಸಿ ಬಳಿದು ಕಿಡಿಗೇಡಿಗಳು ಮತ್ತೆ ಉದ್ಧಟತನ ಮೆರೆದಿದ್ದಾರೆ.

ಮುಂಬೈನಿಂದ ಕಲಬುರಗಿಗೆ ಬರುತ್ತಿದ್ದ ಸಾರಿಗೆ ಬಸ್ ತಡೆದ ಎಂಇಎಸ್ ಕಿಡಿಗೇಡಿಗಳು, ಬಸ್ ಮೇಲೆ ಜೈ ಶಿವಾಜಿ ಅಂತಾ ಬರೆದಿದ್ದಾರೆ. ಬಸ್ ಮುಂಭಾಗದಲ್ಲಿ ಎಂಇಎಸ್ ಧ್ವಜ ಕಟ್ಟಿ, ಬಸ್​ಗೆ ಕಪ್ಪು ಮಸಿ ಬಳಿದಿದ್ದಾರೆ‌. ನಂತರ ಚಾಲಕನ ಕೈಗೆ ಎಂಇಎಸ್ ಧ್ವಜ ನೀಡಿ ಜೈ ಶಿವಾಜಿ ಎಂದು ಘೋಷಣೆ ಕೂಗುವಂತೆ ಬಲವಂತ ಮಾಡಿದ್ದಾರೆ.

ಈ ಪುಂಡಾಟಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಂಇಎಸ್ ಕಾರ್ಯಕರ್ತರ ವಿಕೃತಿ ಕನ್ನಡಿಗರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ. ಎಂಇಎಸ್ ಕಿಡಿಗೇಡಿಗಳ ವಿರುದ್ಧ ತಕ್ಷಣ ಕಾನೂನು ಕ್ರಮಕ್ಕೆ ಮುಂದಾಗುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಹಲಸಿ ಗ್ರಾಮದಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ, ಬಸವಣ್ಣನಿಗೆ ಅಪಮಾನ ಮಾಡಿದ ಮೂವರು ಆರೋಪಿಗಳ ಬಂಧನ

Last Updated : Dec 21, 2021, 1:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.