ಕಲಬುರಗಿ: ಪತ್ನಿಯ ನಡತೆ ಮೇಲೆ ಅನುಮಾನಗೊಂಡ ಪತಿ, ಪತ್ನಿಯ ಕತ್ತು ಹಿಸುಕಿ ಹತ್ಯೆಗೈದ ಘಟನೆ ಹಳೆ ಜೇವರ್ಗಿ ರಸ್ತೆಯ ಉದಯ ನಗರದಲ್ಲಿ ನಡೆದಿದೆ.
ಶೀತಲ್ (36) ಕೊಲೆಯಾದ ಮಹಿಳೆ. ಹೆಂಡತಿಯ ನಡತೆಯ ಮೇಲೆ ಶಂಕೆ ಪಡುತ್ತಿದ್ದ ಪತಿ ಪದೇ ಪದೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಇಂದು ಸಹ ನಡೆದ ಜಗಳ ವಿಕೋಪಕ್ಕೆ ತಿರುಗಿ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಸ್ಟೇಷನ್ ಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.