ETV Bharat / city

ಮದ್ಯ ಬಿಡಿಸುವ ಔಷದ ಸೇವಿಸಿ ಎಂಟು ವರ್ಷದ ಬಾಲಕ‌ ಸಾವು

ಬಾಲಕನ ತಂದೆಗೆ ವಿಪರೀತ ಮದ್ಯ ಸೇವನೆಯ ಚಟವಿತ್ತು. ಅದನ್ನು ಬಿಡಿಸಲು ಬಜ್ಜಿಯಲ್ಲಿ ಔಷಧ ಮಿಶ್ರಣ ಮಾಡಿಡಲಾಗಿತ್ತು. ಬಾಲಕ ಆ ಬಜ್ಜಿಯನ್ನು ತಿಂದಿದ್ದ. ಇದೇ ಕಾರಣಕ್ಕೆ ವಾಂತಿ, ಬೇಧಿ ಶುರುವಾಗಿತ್ತಾ? ಅಥವಾ ಬೇರೆ ಕಾರಣಕ್ಕಾ? ಎಂಬುವುದು ಇನ್ನೂ ಸ್ಪಷ್ಟವಾಗಿಲ್ಲ..

author img

By

Published : May 29, 2022, 3:32 PM IST

eight-year-old-boy-died
ಮದ್ಯ ಬಿಡಿಸುವ ಔಷದ ಸೇವಿಸಿ ಎಂಟು ವರ್ಷದ ಬಾಲಕ‌ ಸಾವು

ಕಲಬುರಗಿ : ವಾಂತಿ, ಬೇಧಿಯಿಂದ ಬಳಲಿ ಬಾಲಕನೋರ್ವ ಸಾವನಪ್ಪಿರುವ ಶಂಕೆ ವ್ಯಕ್ತವಾಗಿದೆ. ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಿನ್ನೆ ಈ ಘಟನೆ ನಡೆದಿದ್ಧು, ತಡವಾಗಿ ಬೆಳಕಿಗೆ ಬಂದಿದೆ. ವಾಡಿ ಪಟ್ಟಣದ ಬಸವನಕಣಿ ಬಡಾವಣೆಯ ನಿವಾಸಿ ವಿಷ್ಣು ಜಾಧವ್(8) ಮೃತ ಬಾಲಕ. ಈತ ಔಷಧ ಮಿಶ್ರಣ ಮಾಡಿ ಇಡಲಾಗಿದ್ದ ಬಜ್ಜಿ ಸೇವಿಸಿದ್ದಾನೆ.

ನಂತರ ಬಾಲಕನಿಗೆ ವಾಂತಿ,ಬೇಧಿ ಪ್ರಾರಂಭವಾಗಿತ್ತು. ಆದರೆ, ವಾಂತಿ, ಬೇಧಿಯಿಂದ ಮೃತಪಟ್ಟಿರುವುದಾಗಿ ಕುಟುಂಬಸ್ಥರು ಹೇಳುತ್ತಿದ್ದಾರೆ. ಬಾಲಕನ ತಂದೆಗೆ ವಿಪರೀತ ಮದ್ಯ ಸೇವನೆಯ ಚಟವಿತ್ತು. ಅದನ್ನು ಬಿಡಿಸಲು ಬಜ್ಜಿಯಲ್ಲಿ ಔಷಧ ಮಿಶ್ರಣ ಮಾಡಿಡಲಾಗಿತ್ತು. ಬಾಲಕ ಆ ಬಜ್ಜಿಯನ್ನು ತಿಂದಿದ್ದ. ಇದೇ ಕಾರಣಕ್ಕೆ ವಾಂತಿ, ಬೇಧಿ ಶುರುವಾಗಿತ್ತಾ? ಅಥವಾ ಬೇರೆ ಕಾರಣಕ್ಕಾ? ಎಂಬುವುದು ಇನ್ನೂ ಸ್ಪಷ್ಟವಾಗಿಲ್ಲ.

ಹೀಗಾಗಿ, ಬಾಲಕನ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕುಟುಂಬಸ್ಥರು ಈ ಬಗ್ಗೆ ಯಾವುದೇ ದೂರು ಸಹ ದಾಖಲಿಸದೆ, ಅಂತ್ಯಸಂಸ್ಕಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ವಾಡಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಕೆರೆಯಲ್ಲಿ ಈಜಲು ಹೋಗಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.