ETV Bharat / city

ಕಲಬುರಗಿಯಲ್ಲಿ ತಿಂಗಳು ಅಘೋಷಿತ ಬಂದ್ :  ಡಿಸಿ ಶರತ್ ಘೋಷಣೆ - ಜಿಲ್ಲಾಧಿಕಾರಿ ಶರತ್ ಬಿ ಸುದ್ದಿಗೋಷ್ಠಿ ನ್ಯೂಸ್​

ಕೊರೊನಾ ವೈರಸ್ ಉಲ್ಬಣಗೊಂಡ ಹಿನ್ನೆಲೆ ಕಲಬುರಗಿ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಒಂದು ತಿಂಗಳುಗಳ ‌ಕಾಲ ಅಘೋಷಿತ ಬಂದ್ ಮುಂದುವರೆಯುವುದು ಅಗತ್ಯ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.

DC Sharath B press meet in kalburgi
ಜಿಲ್ಲಾಧಿಕಾರಿ ಶರತ್ ಬಿ ಸುದ್ದಿಗೋಷ್ಠಿ
author img

By

Published : Mar 16, 2020, 9:07 PM IST

ಕಲಬುರಗಿ: ಕೊರೊನಾ ವೈರಸ್ ಉಲ್ಬಣಗೊಂಡ ಹಿನ್ನೆಲೆ ಕಲಬುರಗಿ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಒಂದು ತಿಂಗಳುಗಳ ‌ಕಾಲ ಅಘೋಷಿತ ಬಂದ್ ಮುಂದುವರೆಯುವುದು ಅಗತ್ಯ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಶರತ್ ಬಿ ಸುದ್ದಿಗೋಷ್ಠಿ

ಜಿಲ್ಲೆಯಲ್ಲಿ ಮಹಾಮಾರಿ‌ ಕೊರೊನಾ ಪ್ರಕರಣಗಳು ಹೆಚ್ಚುವ ಸಾಧ್ಯತೆ ಇರುವ ಕಾರಣ ತುರ್ತು ಸಂದರ್ಭದಲ್ಲಿ ಮಾತ್ರ ಹೊರಗಡೆ ಬನ್ನಿ, ಅನಗತ್ಯವಾಗಿ ತಿರುಗಾಡದಂತೆ ಸೂಚಿಸಿದ್ದಾರೆ. ಕಲಬುರಗಿ ಜನತೆ ಕೂಡ ಮನವಿಗೆ ಸ್ಪಂದಿಸಿದ್ದಾರೆ. ಇದೇ ರೀತಿ ಮುಂದಿನ ದಿನಗಳಲ್ಲಿ ಸಾರ್ವಜನಿಕರು ಸ್ಪಂದಿಸಬೇಕು ಎಂದು ಮನವಿ‌ ಮಾಡಿದರು.

ಕೊರೊನಾ ಸೋಂಕು ‌ಕಲಬುರಗಿ ನಗರಕ್ಕೆ ಮಾತ್ರವಲ್ಲದೇ ಜಿಲ್ಲೆಯ ಹಲವೆಡೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ವಿದೇಶದಿಂದ ಬಂದವರು ನೇರವಾಗಿ ತಮ್ಮ ಊರುಗಳಿಗೆ ತೆರಳಿರುವ ಕಾರಣ ಸೋಂಕು ಕಾಣಿಸಿಕೊಂಡಿದೆ. ಚಿತ್ತಾಪುರ ಹಾಗೂ ಮತ್ತೊಮ್ಮೆ ಚಿಂಚೋಳಿಗೆ ಸೇರಿದ್ದವರೇ ಆಗಿದ್ದಾರೆ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲೂ ಎಚ್ಚರ ವಹಿಸಬೇಕು ಎಂದರು.

ಈಗಾಗಲೇ ಜಿಲ್ಲಾದ್ಯಂತ ಮಾಲ್, ಮಲ್ಟಿಪ್ಲೆಕ್ಸ್, ಜಾತ್ರೆ ಮತ್ತು ಉರುಸ್​, ಸಂತೆ ಎಲ್ಲವನ್ನೂ ರದ್ದು ಮಾಡಿ ಆದೇಶ ಹೊರಡಿಸಲಾಗಿದೆ. ಜೊತೆಗೆ ಮಧ್ಯ ಮಾರಾಟ‌ ಕೊಡ ನಿಷೇಧಿಸಲಾಗಿದೆ.‌ ಮುಂಜಾಗ್ರತಾ ಕ್ರಮವಾಗಿ ಒಂದು ತಿಂಗಳ ‌ಕಾಲ ಅಘೋಷಿತ ಬಂದ್ ವಾತಾವರಣ ಮುಂದುವರೆಯುವುದು ಅಗತ್ಯವಾಗಿದೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.