ETV Bharat / city

ಪಿಎಸ್ಐ ಪರೀಕ್ಷೆ ಅಕ್ರಮ: ಗೋವಾದಲ್ಲಿ ಮೋಜು-ಮಸ್ತಿಯಲ್ಲಿದ್ದ ಪೊಲೀಸ್ ಕಾನ್ಸ್​ಟೇಬಲ್​​ ಅರೆಸ್ಟ್​​

author img

By

Published : Jun 12, 2022, 1:15 PM IST

Updated : Jun 12, 2022, 2:42 PM IST

ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಸಂಬಂಧ ಸಿಐಡಿ ಅಧಿಕಾರಿಗಳು ಪೊಲೀಸ್ ಕಾನ್ಸ್​ಟೇಬಲ್ ಓರ್ವರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಈವರೆಗೆ ಬಂಧಿತರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ.

CID
ಸಿಐಡಿ

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದ ತನಿಖೆ ಮುಂದುವರೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖಾಧಿಕಾರಿಗಳು ಮತ್ತೋರ್ವ ಅಭ್ಯರ್ಥಿಯನ್ನು ಬಂಧಿಸಿದ್ದಾರೆ. ಇಸ್ಮಾಯಿಲ್ ಜಮಾದಾರ್ ಖಾದರಿ ಬಂಧಿತ ಪೊಲೀಸ್ ಕಾನ್ಸ್​ಟೇಬಲ್.

ಸಿಐಡಿ ತನಿಖಾಧಿಕಾರಿಗಳಿಂದ ತಲೆಮರೆಸಿಕೊಂಡಿದ್ದ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಕರ್ಜಗಿ ಗ್ರಾಮದ ಇಸ್ಮಾಯಿಲ್ ಜಮಾದಾರ್ ಖಾದರಿ, ಗೋವಾ ಸೇರಿದಂತೆ ಇತರೆಡೆ ಮೋಜು ಮಸ್ತಿಯಲ್ಲಿ ತೊಡಗಿದ್ದ. ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಬಂಧಿಸಿ ಕಲಬುರಗಿಗೆ ಕರೆತರುತ್ತಿದ್ದಾರೆ‌‌ ಎಂದು ತಿಳಿದು ಬಂದಿದೆ.

ಇಸ್ಮಾಯಿಲ್ ಖಾದರ್ ಈಗಾಗಲೇ ಪೊಲೀಸ್​​ ಇಲಾಖೆಯಲ್ಲಿದ್ದು, ಪಿಎಸ್ಐ ಪರೀಕ್ಷೆ ಬರೆದಿದ್ದ. ಆರ್.ಡಿ ಪಾಟೀಲ್ ಸಹಾಯದಿಂದ ಪರೀಕ್ಷೆಯಲ್ಲಿ ಅಕ್ರಮ ಎಸಗಿದ್ದ ಎನ್ನಲಾಗುತ್ತಿದೆ. ಎರಡು ದಿನಗಳ ಹಿಂದೆ ಇಸ್ಮಾಯಿಲ್ ಸಹೋದರ ಸೈಫನ್ ಕರ್ಜಗಿ‌ ಹಾಗೂ ಮಹೇಶ ಹಿರೊಳ್ಳಿ ಎಂಬುವವರನ್ನು ಸಿಐಡಿ ತನಿಖಾಧಿಕಾರಿಗಳು ಬಂಧಿಸಿದ್ದರು.

ಇದನ್ನೂ ಓದಿ: ಪಿಎಸ್‌ಐ ಪರೀಕ್ಷೆ ಅಕ್ರಮ: ಮತ್ತೆ ಇಬ್ಬರ ಬಂಧನ, ಬಂಧಿತರ ಸಂಖ್ಯೆ 41ಕ್ಕೆ ಏರಿಕೆ

Last Updated : Jun 12, 2022, 2:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.