ಕಲಬುರಗಿ : ದಶಕದ ಹಿಂದೆ ನಡೆದ ವಂಚನೆ ಪ್ರಕರಣ ಬೆನ್ನತ್ತಿದ್ದ ಸಿಬಿಐ ಪೊಲೀಸರು ಬ್ಯಾಂಕ್ಗೆ ಸುಳ್ಳು ದಾಖಲಾತಿ ನೀಡಿ 1.35 ಕೋಟಿ ರೂ. ಸಾಲ ಪಡೆದು ಪಂಗನಾಮ ಹಾಕಿರೋ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಕಲಬುರಗಿ ನಗರದ ದರ್ಗಾ ಏರಿಯಾ ನಿವಾಸಿ ಅಹ್ಮದ್ ಎಂಬಾತನನ್ನು ಬೆಂಗಳೂರು ಸಿಬಿಐ ಅಧಿಕಾರಿಗಳ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಈತ 2009-10ರಲ್ಲಿ ನಗರದ ಸಿಂಡಿಕೇಟ್ ಬ್ಯಾಂಕ್ ಶಾಖೆಯಲ್ಲಿ ಬೀದಿಬದಿ ವರ್ತಕರು ಹಾಗೂ ಸಣ್ಣಪುಟ್ಟ ಕೆಲಸ ಮಾಡಿಕೊಂಡಿರುವವರ ಹೆಸರಲ್ಲಿ ಸುಳ್ಳು ದಾಖಲೆ ಹುಟ್ಟು ಹಾಕಿ 1.35 ಕೋಟಿ ರೂ. ಸಾಲ ಪಡೆದಿದ್ದ.
ಆದರೆ, ಸಾಲದ ಹಣವನ್ನು ಹಿಂದಿರುಗಿಸಿರಲಿಲ್ಲ. ಹೀಗಾಗಿ, ಬ್ಯಾಂಕ್ ನೋಟಿಸ್ ಬಂದ ಬಳಿಕವೇ ಈ ಜನರಿಗೆ ತಮ್ಮ ಹೆಸರಲ್ಲಿ ಸಾಲ ಇರೋ ಬಗ್ಗೆ ತಿಳಿದು ಬಂದಿದೆ.
ಇದನ್ನೂ ಓದಿ: ಕಡಿಮೆ ಹಣಕ್ಕೆ ಕಲಬೆರೆಕೆ ಡೀಸೆಲ್ ಮಾರಾಟ ಆರೋಪ : ಚಾಮರಾಜನಗರದಲ್ಲಿ ಐವರ ಬಂಧನ
ಸದ್ಯ ಸಿಬಿಐ ಅಧಿಕಾರಿಗಳು, ಸಾಲದ ಹಗರಣದಲ್ಲಿ ಯಾರ‍್ಯಾರಿದ್ದಾರೆ, ಎಲ್ಲೆಲ್ಲಿ ದಾಖಲೆ ಹುಟ್ಟು ಹಾಕಲಾಗಿದೆ, ರೆಜಿಸ್ಟ್ರಾರ್ ಕಚೇರಿಯಲ್ಲಿನ ದಲ್ಲಾಳಿಗಳು ಸೇರಿದಂತೆ ಹಲವರ ವಿಚಾರಣೆ ನಡೆಸುತ್ತಿರುವ ಮಾಹಿತಿ ಲಭ್ಯವಾಗಿದೆ.