ಹುಬ್ಬಳ್ಳಿ: ಬೈಕ್ನ ಹಿಂಬದಿ ಕುಳಿತಿದ್ದ ಮಹಿಳೆ ಬೈಕ್ ರೋಡ್ ಹಂಪ್ಸ್ ದಾಟುವಾಗ ಕೆಳಗೆ ಬಿದ್ದು ಮೃತಪಟ್ಟ ಘಟನೆ ನೂಲ್ವಿ ಕ್ರಾಸ್ ಬಳಿ ನಡೆದಿದೆ.
ಬೈಕ್ನಲ್ಲಿ ಶರೇವಾಡದಿಂದ ಹುಬ್ಬಳ್ಳಿಗೆ ಬರುತ್ತಿದ್ದ ದಂಪತಿ , ಬೈಕ್ ರೋಡ್ ಹಂಪ್ಸ್ ಹತ್ತಿ ಇಳಿಯುವಾಗ ಬೈಕ್ ನಿಯಂತ್ರಣ ತಪ್ಪಿದ ಕಾರಣ ಹಿಂಬದಿ ಕೂತಿದ್ದ ಮಹಿಳೆ ಕೆಳಗಡೆ ಬಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತಪಟ್ಟ ಮಹಿಳೆಯನ್ನು ರೂಪಾ ಸಿದ್ದಪ್ಪ ಶರೇವಾಡ (31) ಎಂದು ಗುರುತಿಸಲಾಗಿದೆ. ನೂಲ್ವಿ ದನದ ಮಾರುಕಟ್ಟೆ ಬಳಿ ಹೊಸದಾಗಿ ಹಾಕಿದ ರೋಡ್ ಹಂಪ್ನಿಂದಾಗಿ ಈ ಒಂದು ದುರ್ಘಟನೆ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರೋಡ್ ಹಂಪ್ಸ್ ಆದಾಗಿನಿಂದ ಪದೇ ಪದೆ ಅಪಘಾತಗಳು ಸಂಭವಿಸುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ. ಈ ಸಂಬಂಧ ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಕೇಂದ್ರದ ಮೂರು ಕೃಷಿ ಕಾನೂನುಗಳಿಗೆ ತಡೆಯಾಜ್ಞೆ ನೀಡಿದ ಸುಪ್ರೀಂಕೋರ್ಟ್