ಹುಬ್ಬಳ್ಳಿ: ಮಠದ ಆಡಳಿತ ಮಂಡಳಿಯ ಸದಸ್ಯರೊಬ್ಬರ ನಿಂದನೆಯಿಂದ ಮನನೊಂದು ಅಣ್ಣಿಗೇರಿ ದಾಸೋಹ ಮಠ ತೊರೆದಿದ್ದ ಶಿವಕುಮಾರ್ ಸ್ವಾಮೀಜಿ ಅವರನ್ನು ಮತ್ತೆ ಮಠಕ್ಕೆ ಕರೆತರುವ ಸಲುವಾಗಿ ಇಂದು ಭಕ್ತರ ಮಹಾದಂಡೇ ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಬಂದಿದೆ.
ಸುಮಾರು ಆರು ತಿಂಗಳ ಹಿಂದೆಯೇ ಸ್ವಾಮೀಜಿ ಮಠ ತೊರೆದು ಹುಬ್ಬಳ್ಳಿಗೆ ಬಂದಿದ್ದರು. ಬೆಳಗ್ಗೆಯಿಂದಲೇ ಸ್ವಾಮೀಜಿಯವರ ಮನವೊಲಿಸಲು ಭಕ್ತರು ಮುಂದಾಗಿದ್ದು, ಸ್ವಾಮೀಜಿಯವರನ್ನು ಕರೆದುಕೊಂಡೇ ಹೋಗುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.
ಮಠವನ್ನು ಮಾತ್ರವಲ್ಲದೆ ಊರಿನ ಉದ್ಧಾರಕ್ಕಾಗಿ ಶ್ರಮಿಸಿದ ಸ್ವಾಮೀಜಿ ಕಾರ್ಯಕ್ಕೆ ಊರಿಗೆ ಊರೇ ಮನವೊಲಿಸಲು ಬಂದಿದೆ. ಮಠದಲ್ಲಿ ಜ್ಞಾನ ದಾಸೋಹದ ಮೂಲಕ ಅಣ್ಣಿಗೇರಿ ಪಟ್ಟಣವನ್ನು ಶ್ರೀಮಂತಗೊಳಿಸಿದ ಸ್ವಾಮೀಜಿಯವರ ಆಗಮನಕ್ಕೆ ಊರಿಗೆ ಊರೇ ಎದುರು ನೋಡುತ್ತಿದೆ.