ETV Bharat / city

ಧಾರವಾಡದಲ್ಲಿ‌ ಮತ್ತೆರಡು ಒಮ್ರಿಕಾನ್ ಸೋಂಕಿತರು ಪತ್ತೆ.. ಹೆಚ್ಚಿದ ಆತಂಕ - ಧಾರವಾಡ ಜಿಲ್ಲಾಧಿಕಾರಿ ನಿತೇಶ್​ ಪಾಟೀಲ್

ಧಾರವಾಡ ಜಿಲ್ಲೆಯಲ್ಲಿ 53 ವರ್ಷದ ಶಿಕ್ಷಕಿಗೆ ಮತ್ತು 14 ವರ್ಷದ ಬಾಲಕಿಗೆ ಒಮಿಕ್ರಾನ್ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ನಿತೇಶ್​ ಪಾಟೀಲ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ನಿತೇಶ್​ ಪಾಟೀಲ್
ಜಿಲ್ಲಾಧಿಕಾರಿ ನಿತೇಶ್​ ಪಾಟೀಲ್
author img

By

Published : Jan 3, 2022, 11:58 AM IST

Updated : Jan 3, 2022, 1:31 PM IST

ಧಾರವಾಡ: ಜಿಲ್ಲೆಯಲ್ಲಿ ಮತ್ತೆರಡು ಒಮಿಕ್ರಾನ್ ಪ್ರಕರಣಗಳು ದೃಢಪಟ್ಟಿವೆ ಎಂದು ಜಿಲ್ಲಾಧಿಕಾರಿ ನಿತೇಶ್​ ಪಾಟೀಲ್ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 53 ವರ್ಷದ ಶಿಕ್ಷಕಿಗೆ ಮತ್ತು 14 ವರ್ಷದ ಬಾಲಕಿಗೆ ಒಮಿಕ್ರಾನ್ ಸೋಂಕು ತಗುಲಿದೆ. ಇಬ್ಬರೂ ಕೂಡ ಹುಬ್ಬಳ್ಳಿಯವರು ಎಂದು ಮಾಹಿತಿ ನೀಡಿದ್ದಾರೆ.

ಡಿಸೆಂಬರ್​ 19 ರಂದು ಮಹಿಳೆಗೆ ಮತ್ತು ಡಿ. 17 ರಂದು ಬಾಲಕಿಗೆ ಕೊರೊನಾ ಸೋಂಕು ಪತ್ತೆಯಾಗಿತ್ತು. ನಂತರ ಜಿನೋಮಿಕ್ ಸೀಕ್ವೆನ್ಸಿಂಗ್ ವರದಿಯಲ್ಲಿ ಒಮಿಕ್ರಾನ್ ದೃಢಪಟ್ಟಿದೆ ಎಂದು ಸ್ಪಷ್ಟಪಡಿಸಿದರು.

ಒಮಿಕ್ರಾನ್ ಪ್ರಕರಣಗಳ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ನಿತೇಶ್​ ಪಾಟೀಲ್

ಇಬ್ಬರು ಸೋಂಕಿತರು ಹೋಂ ಐಸೋಲೇಷನ್​ನಲ್ಲಿದ್ದಾರೆ. ಸೋಂಕಿತ ಮಹಿಳೆಗೆ ಎರಡು ಡೋಸ್ ವ್ಯಾಕ್ಸಿನ್ ನೀಡಲಾಗಿದೆ. ಸೋಂಕಿತರ ಸಂಪರ್ಕಕ್ಕೆ ಬಂದ 395 ಜನರ ವರದಿ ಪಾಸಿಟಿವ್ ಬಂದಿದೆ. ಆದರೂ ಒಮಿಕ್ರಾನ್ ದೃಢಪಟ್ಟ ಹಿನ್ನೆಲೆ ಇನ್ನೊಮ್ಮೆ ಅವರನ್ನು ಟೆಸ್ಟ್ ಮಾಡುತ್ತೇವೆ ಎಂದರು.

Last Updated : Jan 3, 2022, 1:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.