ETV Bharat / city

ಈ ಸಾರಿಯೂ ಪ್ರೇಮಿಗಳ ದಿನ ವಿರೋಧಿಸಿದ ಶ್ರೀರಾಮಸೇನೆ - ಭಿತ್ತಿಪತ್ರದ ಮೂಲಕ ಜಾಗೃತಿ

ಪಾರ್ಕ್ ಹಾಗೂ ಹೋಟೆಲ್‌ಗಳಿಗೆ ತೆರಳಿ ಪ್ರೇಮಿಗಳ ದಿನಾಚರಣೆ ಮಾಡಲು ಪ್ರೇಮಿಗಳು ಮುಂದಾಗಿದ್ರೆ, ಅದನ್ನು ವಿರೋಧಿಸಿ ಅವರಿಗೆ ಭಿತ್ತಿಪತ್ರದ ಮೂಲಕ ಜಾಗೃತಿ ಮೂಡಿಸ್ತಾರಂತೆ..

tomorrow-is-valentine-day-team-srirama-senasena-warns
40 ತಂಡ ರಚನೆ ಮಾಡಿದ ಶ್ರೀರಾಮಸೇನೆ
author img

By

Published : Feb 13, 2021, 8:01 PM IST

ಧಾರವಾಡ : ನಾಳೆ ನಡೆಯುವ ಪ್ರೇಮಿಗಳ ದಿನಾಚರಣೆಯನ್ನ ಈ ಸಾರಿಯೂ ಶ್ರೀರಾಮಸೇನೆ ವಿರೋಧಿಸಿದೆ.

ಪ್ರೇಮಿಗಳ ದಿನ ವಿರೋಧಿಸಿದ ಶ್ರೀರಾಮಸೇನೆ..

ಓದಿ: ಕಾಶಪ್ಪನವರು ಅಂದ್ರೆ ಯಾರು, ಬಾರಲ್ಲಿ ಗಲಾಟೆ ಮಾಡಿಕೊಂಡಿದ್ರಲ್ಲ ಅವರಾ..!

ಈ ವಿಚಾರವಾಗಿ ಮಾತನಾಡಿದ ಶ್ರೀರಾಮಸೇನೆ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್, ಇದೊಂದು ವಿದೇಶಿ ವಿಕೃತಿಯಾಗಿದೆ. ಹುಬ್ಬಳ್ಳಿ-ಧಾರವಾಡದಲ್ಲಿ 40 ತಂಡಗಳನ್ನು ರಚನೆ ಮಾಡಲಾಗಿದೆ. ಆ ತಂಡದಲ್ಲಿನ ಕಾರ್ಯಕರ್ತರು ವಿವಿಧ ಪಾರ್ಕ್ ಹಾಗೂ ವಿವಿಗಳಲ್ಲಿ ನಡೆಯುವ ಅಸಭ್ಯ ವರ್ತನೆಯನ್ನು ಪೊಲೀಸರ ಗಮನಕ್ಕೆ ತರುವ ಕೆಲಸ ಮಾಡಲಿವೆ ಎಂದರು.

ಭಜರಂಗದಳ, ಶ್ರೀರಾಮಸೇನೆ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪೊಲೀಸರ ಗಮನಕ್ಕೆ ತರುವ ಮೂಲಕ ಅವರಿಗೆ ಸಹಕಾರ ನೀಡಲಿದ್ದಾರೆ. ಪಾರ್ಕ್ ಹಾಗೂ ಹೋಟೆಲ್‌ಗಳಿಗೆ ತೆರಳಿ ಪ್ರೇಮಿಗಳ ದಿನಾಚರಣೆ ಮಾಡಲು ಪ್ರೇಮಿಗಳು ಮುಂದಾಗಿದ್ದರೆ, ಅದನ್ನು ವಿರೋಧಿಸಿ ಅವರಿಗೆ ಭಿತ್ತಿಪತ್ರದ ಮೂಲಕ ಜಾಗೃತಿ ಮೂಡಿಸಲು ಹಿಂದೂಪರ ಸಂಘಟನೆಗಳು ಮುಂದಾಗಿವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.