ಹುಬ್ಬಳ್ಳಿ: ನರೇಂದ್ರ ಮೋದಿ ಕರೆ ಕೊಟ್ಟಿರುವ ಜನತಾ ಕರ್ಪ್ಯೂಗೆ ಹುಬ್ಬಳ್ಳಿ ಜನತೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು,ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನ ಬಂದ್ ಮಾಡಲಾಗಿದೆ.
ಹುಬ್ಬಳ್ಳಿಯ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ನಿಲಜನ್ ರಸ್ತೆ, ರಾಷ್ಟ್ರೀಯ ಹೆದ್ದಾರಿ ಬಿಜಾಪುರ ರಸ್ತೆ ಎಲ್ಲವೂ ಸಂಪೂರ್ಣ ಬಂದ್ ಆಗಿದ್ದು, ಹುಬ್ಬಳ್ಳಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ನಗರದಲ್ಲಿ ಕೆಮಿಕಲ್ಸ್ ಮಿಶ್ರಿತ ನೀರನ್ನು ಪೈಪ್ ಮೂಲಕ ಹಾಯಿಸಿ ಪುಟ್ಪಾತ್ ಹಾಗೂ ಪುಟ್ಪಾತ್ ಮೇಲಿರುವ ಗೇಟ್ಗಳನ್ನು ಸ್ವಚ್ಛಗೊಳಿಸಿದರು.
ಕೊರೊನಾ ವೈರಸ್ ತಡೆಗೆ ಪ್ರಧಾನಿ ಮೋದಿಯವರು ಕರೆ ನೀಡಿದ ಜನತಾ ಕರ್ಪ್ಯೂಗೆ ಹುಬ್ಬಳ್ಳಿಯ ದುಮವಾಡ ಗ್ರಾಮ ಸೇರಿದಂತೆ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿಯೂ ಕೂಡ ಬಂದ್ ವಾತಾವರಣ ನಿರ್ಮಾಣವಾಗಿದೆ. ಜನತಾ ಕರ್ಪ್ಯೂಗೆ ಹಳ್ಳಿ ಜನರು ಕೈ ಜೋಡಿಸಿದ್ದು,ರಸ್ತೆ, ಕಚೇರಿ ಹಾಗೂ ಶಾಲಾ ಮೈದಾನಗಳು ಖಾಲಿ ಖಾಲಿ ಹೊಡೆಯುತ್ತಿವೆ.