ಹುಬ್ಬಳ್ಳಿ: ನಗರದ ಹೆಗ್ಗೇರಿಯ ಗುಡಿ ಪ್ಲಾಟ್ನಲ್ಲಿರುವ ಸುಶಾಂತಿ ಚರ್ಚ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ.
ನಿನ್ನೆ ರಾತ್ರಿ 10.15 ರ ಸುಮಾರಿಗೆ ಕಿಡಿಗೇಡಿಗಳು ಏಕಾಏಕಿ ಬಂದು ಚರ್ಚ್ ಮೇಲೆ ಕಲ್ಲು ಎಸೆದು ಹೋಗಿದ್ದಾರೆ. ಇದರಿಂದ ಚರ್ಚ್ ಮುಂಭಾಗ ಹಾಕಲಾಗಿರುವ ತಗಡು ಹಾಗೂ ಎರಡು ಹಂಚು ತುಂಡಾಗಿವೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಹಳೇ ಹುಬ್ಬಳ್ಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಕಳೆದ ವಾರವೂ ಕೆಲವು ಕಿಡಿಗೇಡಿಗಳು ಚರ್ಚ್ ಮೇಲೆ ಕಲ್ಲು ತೂರಿದ್ದರು. ಈ ಕುರಿತು ಕೂಡ ಪೊಲೀಸರಿಗೆ ದೂರು ನೀಡಲಾಗಿತ್ತು.