ETV Bharat / city

ಯೋಗಿ ಆದಿತ್ಯನಾಥ್​ರಂತೆ ಸಿಎಂ ಬೊಮ್ಮಾಯಿ ಗಟ್ಟಿಯಾಗಲಿ: ಮುತಾಲಿಕ್​

author img

By

Published : Jun 8, 2022, 4:53 PM IST

ಬಿಜೆಪಿ ಸರ್ಕಾರ ನಮ್ಮಂತಹ ಸಂಘಟನೆಗಳ ಶ್ರಮದಿಂದ ಅಧಿಕಾರಕ್ಕೆ ಬಂದಿದೆ. ಆಜಾನ್​ ವಿಚಾರದಲ್ಲಿ ಸುಪ್ರೀಂಕೋರ್ಟ್​ ನೀಡಿದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಎಂದು ಪ್ರಮೋದ್​ ಮುತಾಲಿಕ್​ ಒತ್ತಾಯಿಸಿದರು.

ಪ್ರಮೋದ್​ ಮುತಾಲಿಕ್​
ಪ್ರಮೋದ್​ ಮುತಾಲಿಕ್​

ಹುಬ್ಬಳ್ಳಿ: ಸುಪ್ರೀಂಕೋರ್ಟ್ ನಿಯಮ ಪಾಲಿಸದೇ ಇರುವವರ ಮೇಲೆ ಗುಂಡಿಟ್ಟು ಹೊಡಿಯೋ ಹೇಳಿಕೆಗೆ ಈಗಲೂ ಬದ್ಧ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪುನರುಚ್ಚರಿಸಿದ್ದಾರೆ.

ಇಲ್ಲಿನ ಕೇಶ್ವಾಪುರ ಮಧುರಾ ಕಾಲೋನಿಯಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಧ್ವನಿವರ್ಧಕ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ಜಾರಿ ಮಾಡಲು ಆಗಲ್ಲ ಎಂದಾದರೆ ರಾಜೀನಾಮೆ ಕೊಟ್ಟು, ನಮಗೆ ಅಧಿಕಾರ ಕೊಡಿ. ಅಧಿಕಾರವನ್ನು ನಾವು ನಡೆಸಿ ಕಾನೂನು ಪಾಲನೆ ಮಾಡುವುದನ್ನು ತೋರಿಸುತ್ತೇವೆ ಎಂದು ಗುಡುಗಿದರು.

ಬಿಜೆಪಿ ನಮ್ಮಂತಹ ಸಂಘಟನೆಗಳ ಶ್ರಮದಿಂದಲೇ ಅಧಿಕಾರಕ್ಕೆ ಬಂದಿದೆ. ಜನಪ್ರತಿನಿಧಿಗಳಿಗೆ ಎಚ್ಚರಿಕೆ ಕೊಡಲೆಂದೇ ಇವತ್ತು ಹೋರಾಟ ಮಾಡ್ತಿದ್ದೇವೆ. ಧ್ವನಿವರ್ಧಕ ವಿಚಾರದಲ್ಲಿ ಕೋರ್ಟ್ ನೀಡಿದ ಆದೇಶ ಇನ್ನೂ ಜಾರಿಯಾಗ್ತಿಲ್ಲ. ಇದೇ ರೀತಿ ನಿರ್ಲಕ್ಷ್ಯ ಮಾಡಿದರೆ ನಿಮ್ಮ ಮನೆಗಳ ಮುಂದೆಯೇ ಭಜನೆ ಆರಂಭಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಶಾಸಕರು ಮತ್ತು ಅಧ್ಯಕ್ಷರ ಮನೆ ಮುಂದೆಯೇ ಮೈಕ್ ಇಟ್ಟುಕೊಂಡು ಭಜನೆ ನಡೆಸುತ್ತೇವೆ. ಬರೀ ಹಿಂದೂಗಳ ವೋಟ್ ತಗೊಳ್ಳೋದಲ್ಲ. ಹಿಂದೂಗಳ ಸಮಸ್ಯೆಯನ್ನು ಅರಿತುಕೊಳ್ಳಬೇಕು. ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ರೀತಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಗಟ್ಟಿಯಾಗಿ ನಿಲ್ಲಬೇಕು. ಕಣ್ಣೊರೆಸುವ ತಂತ್ರಗಾರಿಕೆ ಬಿಡಬೇಕು. ನಿಮ್ಮ ಕೈಲಿ ಆಗದೇ ಇದ್ದಲ್ಲಿ ರಾಜೀನಾಮೆ ಕೊಡಿ. ನನಗೆ ಅಧಿಕಾರ ಕೊಡಿ. 24 ಗಂಟೆಯಲ್ಲಿ ಅದನ್ನು ಮಾಡಿ ತೋರಿಸುತ್ತೇನೆ. ಪಾಲಿಸದೆ ಇದ್ದವರ ಮೇಲೆ ಗುಂಡು ಹಾರಿಸ್ತೇನೆ ಎಂದರು.

ಇದನ್ನೂ ಓದಿ: ಮೊದಲು ಚಡ್ಡಿ ಸರಿಯಾಗಿ ಇಟ್ಕೊಳೋಕೆ ಹೇಳಿ; ಮಾಜಿ ಶಾಸಕನಿಗೆ ನಾಗರಾಜ್ ಯಾದವ್ ತಿರುಗೇಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.