ETV Bharat / city

ಶ್ರೀ ಸಿದ್ಧಾರೂಢಮಠದಲ್ಲಿ ಸೋಲಾರ್​ ಪ್ಯಾನೆಲ್ ಅವ್ಯವಹಾರ : ಆರೋಪ ತಳ್ಳಿಹಾಕಿದ ಆಡಳಿತ ಮಂಡಳಿ - ಸಿದ್ಧಾರೂಢರ ಮಠದಲ್ಲಿ ಸೋಲಾರ್ ಪ್ಯಾನೆಲ್ ಹಗರಣ

ಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ಧಾರೂಢರ ಮಠದಲ್ಲಿ ಸೋಲಾರ್ ಪ್ಯಾನೆಲ್ ಹೆಸರಿನಲ್ಲಿ ಅವ್ಯವಹಾರದ ಆರೋಪವೊಂದು ಕೇಳಿ ಬಂದಿದೆ. ಆದರೆ, ಈ ಆರೋಪವನ್ನು ಮಠದ ಆಡಳಿತ ಮಂಡಳಿ ತಳ್ಳಿಹಾಕಿದೆ..

solar-panel-scam-in-siddarooda-math-administration-denied
ಸಿದ್ಧಾರೂಢಮಠದಲ್ಲಿ ಸೋಲಾರ್​ ಪ್ಯಾನೆಲ್ ಅವ್ಯವಹಾರ: ಆರೋಪ ತಳ್ಳಿಹಾಕಿದ ಆಡಳಿತ ಮಂಡಳಿ
author img

By

Published : May 7, 2022, 5:38 PM IST

ಹುಬ್ಬಳ್ಳಿ: ದಿನವೂ ಓಂಕಾರ ನಾದ ಮೊಳಗುವ ಹಾಗೂ ದಿನದ 24 ಗಂಟೆಯೂ ಭಜನೆಯ ನಾದ ಹೊಮ್ಮುವ ವಾಣಿಜ್ಯನಗರಿ ಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ಧಾರೂಢರ ಮಠದಲ್ಲಿ ಸೋಲಾರ್ ಪ್ಯಾನೆಲ್ ಹೆಸರಿನಲ್ಲಿ ಅವ್ಯವಹಾರದ ಆರೋಪವೊಂದು ಕೇಳಿ ಬಂದಿದೆ. ಒಟ್ಟು 57 ಲಕ್ಷ ರೂಪಾಯಿ ವೆಚ್ಚದಲ್ಲಿ ಬೆಳಗಾವಿ ಕಂಪನಿಯೊಂದಕ್ಕೆ ಟೆಂಡರ್ ನೀಡಿದ್ದು, ಟೆಂಡರ್ ಅನಧಿಕೃತವಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಈ ಹಿಂದೆ ಇದ್ದ ಅಧ್ಯಕ್ಷರಾದ ಡಿ.ಡಿ.ಮಾಳಗಿಯವರು ಸ್ವಹಿತಾಸಕ್ತಿಯಿಂದ ತಮಗೆ ಬೇಕಾದವರಿಗೆ ಟೆಂಡರ್ ನೀಡಿದ್ದು, ಇದರಲ್ಲಿ ಅನಧಿಕೃತವಾಗಿ ₹52 ಲಕ್ಷ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಈಗಾಗಲೇ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆ ಮಾಡಲಾಗಿದೆ. ಆದರೆ, ಆರು ಸೋಲಾರ್ ಪ್ಯಾನೆಲ್​ಗಳನ್ನು ಬೆಳಗಾವಿಯ ಯುನಿಸನ್ ಸೋಲಾರ್ ಕಂಪನಿಯು ತೆಗೆದುಕೊಂಡು ಹೋಗಿದೆ.

ಕಾಮಗಾರಿ ಅಪೂರ್ಣಗೊಂಡಿದ್ದು,‌ ಬೇಕಾಬಿಟ್ಟಿಯಾಗಿ ಸಾರ್ವಜನಿಕರ ಹಣವನ್ನು ಇಲ್ಲಿನ ಅಧ್ಯಕ್ಷರಾಗಿದ್ದ ಡಿ.ಡಿ.ಮಾಳಗಿ ವ್ಯಯಮಾಡಿ ಅವ್ಯವಹಾರ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆದರೆ, ಈ ಆರೋಪವನ್ನು ಮಾತ್ರ ಶ್ರೀ ಸಿದ್ಧಾರೂಢ ಮಠದ ಆಡಳಿತ ಮಂಡಳಿ ಒಪ್ಪುತ್ತಿಲ್ಲ.

ಇದು ಸಿದ್ಧಾರೂಢ ಮಠದಲ್ಲಿ ಕೇಳಿ ಬಂದ ಮೊದಲ ಅವ್ಯವಹಾರ ಆರೋಪವಾಗಿದ್ದು, ಅಧ್ಯಕ್ಷರಾಗಿದ್ದ ಡಿ.ಡಿ.ಮಾಳಗಿಯವರು ರಾಜೀನಾಮೆ ನೀಡಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಆದರೆ, ಇಲ್ಲಿನ ಆಡಳಿತ ಮಂಡಳಿಯವರು, ಮಾಳಗಿಯವರು ಅನಾರೋಗ್ಯದ ಕಾರಣ ರಾಜೀನಾಮೆ ನೀಡಿದ್ದಾರೆಯೇ ವಿನಃ ಇಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಶ್ರೀ ಸಿದ್ಧಾರೂಢಮಠದಲ್ಲಿ ಸೋಲಾರ್​ ಪ್ಯಾನೆಲ್ ಅವ್ಯವಹಾರ ಆರೋಪ..

ಈಗಾಗಲೇ ಸೋಲಾರ್ ಪ್ಯಾನೆಲ್ ಜೋಡಣೆಗೆ ಮುಖ್ಯ ಆಡಳಿತಾಧಿಕಾರಿಗಳ ಪತ್ರ ಸಂಖ್ಯೆ 1885/2018ರ ಪ್ರಕಾರ 57,90,000 ರೂಪಾಯಿಗೆ ಟೆಂಡರ್ ನೀಡಿದ್ದು, ಏಳು ಕಂತುಗಳಲ್ಲಿ ಸುಮಾರು 52,50,000 ಹಣವನ್ನು ನೀಡಲಾಗಿದೆ. ಇಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಇದು ಆಡಳಿತ ಮಂಡಳಿಯ ಕಾರ್ಯವೈಖರಿಗೆ ಮಸಿ ಬಳೆಯಲು ನಡೆಸಿರುವ ಹುನ್ನಾರ ಎನ್ನುತ್ತಾರೆ ಉಪಾಧ್ಯಕ್ಷ ಮಣ್ಣೂರ.

ಗುರು ಪರಂಪರೆಯ ಸಿದ್ಧಾರೂಢರ ಮಠದಲ್ಲಿ ಆಧ್ಯಾತ್ಮಿಕತೆಗೆ ಮಾತ್ರವೇ ಜಾಗವಿತ್ತು. ಆದರೆ, ಈಗ ಅವ್ಯವಹಾರದ ಆರೋಪ ಸುತ್ತಿಕೊಂಡಿದೆ. ಆದರೆ, ಆಡಳಿತ ಮಂಡಳಿ ಮಾತ್ರ ಯಾವುದೇ ಅವ್ಯವಹಾರ ನಡೆದಿಲ್ಲ ಎನ್ನುತ್ತಿದೆ. ನಿಜ ಯಾವುದು ಸುಳ್ಳು ಯಾವುದೋ ಆ ಆರೂಢರೇ ಬಯಲು ಮಾಡಬೇಕು.

ಇದನ್ನೂ ಓದಿ: ಕಳೆದ 70 ವರ್ಷದಿಂದ ಜನ ಸಮಸ್ಯೆಯಿಂದ ಬೇಸತ್ತಿದ್ದು, ಅದನ್ನು ಪರಿಹರಿಸುವ ಕೆಲಸ ಮಾಡುತ್ತಿದ್ದೇವೆ : ಸಿಎಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.