ಹುಬ್ಬಳ್ಳಿ: ಸಿದ್ದಿ ಜನಾಂಗದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದ್ದ ಹಿನ್ನೆಲೆ ಸಿದ್ದಿ ಜನಾಂಗದ ಇಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ ಸಿಹಿ ನೀಡುವ ಮೂಲಕ ಅಭಿನಂದನೆ ಸಲ್ಲಿಸಿದರು.
ನಂತರ ಮಾತನಾಡಿದ ಸಿದ್ದಿ ಜನಾಂಗದ ಮುಖಂಡ ಇಮಾಮ್ ಸಿದ್ದಿ, ಉತ್ತರ ಕನ್ನಡ ಜಿಲ್ಲೆಯಲ್ಲಿನ ಸಿದ್ದಿ ಜನಾಂಗದವರನ್ನು 2003ರಲ್ಲಿ ಎಸ್ ಟಿ ಸಮುದಾಯಕ್ಕೆ ಸೇರಿಸಿ ಎಂದು ಆಗಿನ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಯ ಜನರನ್ನು ಮಾತ್ರ ಸಮುದಾಯಕ್ಕೆ ಸೇರಿಸಿರಲಿಲ್ಲ. ಈಗಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಿಲ್ಲೆಯ ಸಿದ್ದಿ ಜನಾಂಗವನ್ನು ಎಸ್ಟಿ ಸಮುದಾಯಕ್ಕೆ ಸೇರಿಸಿದೆ. ಇದು ನಮ್ಮ ಸಮುದಾಯದ ಜನರಿಗೆ ಸಂತಸದ ವಿಚಾರ. ಆದ್ದರಿಂದ ಸಿದ್ದಿ ಸಮುದಾಯ ಕೇಂದ್ರ ಸಚಿವರಿಗೆ ಹಾಗೂ ಬಿಜೆಪಿ ಪಕ್ಷದ ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತದೆ ಮತ್ತು ಆದಷ್ಟು ಬೇಗ ನಮಗೆ ಆದೇಶ ಪ್ರತಿ ನೀಡಬೇಕು ಎಂದರು.