ಧಾರವಾಡ : ಧಾರವಾಡ-ಹಾವೇರಿ-ಗದಗ್ ದ್ವಿಸದಸ್ಯ ಕ್ಷೇತ್ರದ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಲೀಂ ಅಹ್ಮದ್ ಮತ್ತು ಬಿಜೆಪಿಯ ಪ್ರದೀಪ್ ಶೆಟ್ಟರ್ ಗೆಲುವಿನ ನಗೆ ಬೀರಿದ್ದಾರೆ.
2,500 ಮತಗಳನ್ನ ಪಡೆದು ಮೊದಲ ಪ್ರಾಶಸ್ತ್ಯ ಮತದಲ್ಲಿ ಸಲೀಂ ಅಹ್ಮದ್ ಜಯಭೇರಿ ಬಾರಿಸಿದ್ದಾರೆ. ಬಿಜೆಪಿಯ ಪ್ರದೀಪ್ ಶೆಟ್ಟರ್ 2472 ಮತ ಗಳಿಸಿ ದ್ವಿತೀಯ ಪ್ರಾಶಸ್ತ್ಯದ ಮತದಲ್ಲಿ ಗೆದ್ದಿದ್ದಾರೆ.
ಈ ಕ್ಷೇತ್ರ ಧಾರವಾಡ, ಹಾವೇರಿ, ಗದಗ ಜಿಲ್ಲೆಯನ್ನೊಳಗೊಂಡಿದೆ. ಕೃಷಿ ವಿವಿಯಲ್ಲಿ ಮತ ಎಣಿಕೆ ಕಾರ್ಯ ನಡೆದಿದೆ. ಧಾರವಾಡ ಕ್ಷೇತ್ರದಲ್ಲಿ ಎರಡು ಸ್ಥಾನಗಳಿಗೆ ಸಲೀಂ ಅಹ್ಮದ್ ಮತ್ತು ಪ್ರದೀಪ್ ಶೆಟ್ಟರ್ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ಉತ್ತರ ಕನ್ನಡ ಪರಿಷತ್ ಫಲಿತಾಂಶ : ಬಿಜೆಪಿಯ ಗಣಪತಿ ಉಳ್ವೇಕರ್ಗೆ ಗೆಲುವು
ಒಟ್ಟು 10 ಅಭ್ಯರ್ಥಿಗಳು ಕಣದಲ್ಲಿದ್ದರು. ಪ್ರದೀಪ್ ಶೆಟ್ಟರ್, ಸಲೀಂ ಅಹ್ಮದ್, ಮಲ್ಲಿಕಾರ್ಜುನ ಹಾವೇರಿ ಪ್ರಮುಖ ಅಭ್ಯರ್ಥಿಗಳಾಗಿದ್ದರು. ಒಟ್ಟು ಚಲಾವಣೆಯಾದ ಮತ 7452. ಎರಡು ಕೊಠಡಿಗಳಲ್ಲಿನ 14 ಟೇಬಲ್‌ಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. 77 ಸಿಬ್ಬಂದಿ ಎಣಿಕೆಗೆ ನಿಯೋಜನೆ ಮಾಡಲಾಗಿತ್ತು. ಬಂದೋಬಸ್ತ್ಗೆ 230 ಪೊಲೀಸರನ್ನು ನಿಯೋಜಿಸಲಾಗಿದೆ.
- ಕಾಂಗ್ರೆಸ್-3,206
- ಬಿಜೆಪಿ-2,472.
- ಪಕ್ಷೇತರ-1,153.