ETV Bharat / city

ಹುಬ್ಬಳ್ಳಿ ಗಲಭೆ : ಬಂಧಿತರ ಬಿಡುಗಡೆಗೆ ಸಂಬಂಧಿಕರ ಒತ್ತಾಯ - ಬಂಧಿತರು ನಿರಾಪರಾಧಿಗಳೆಂದು ಕೋರ್ಟ್ ಎದುರು ಸಂಬಂಧಿಗಳ ಗೋಳಾಟ

ಕಲ್ಲು ತೂರಾಟ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಸಂಬಂಧಿಕರು ತಮ್ಮವರನ್ನು ಬಿಡುಗಡೆ ಮಾಡುವಂತೆ ಕೋರ್ಟ್ ಆವರಣದಲ್ಲಿ ಒತ್ತಾಯಿಸಿದರು..

Relatives shout in front of the court that the detainees are innocent
ಬಂಧಿತರು ನಿರಾಪರಾಧಿಗಳೆಂದು ಕೋರ್ಟ್ ಎದುರು ಸಂಬಂಧಿಗಳ ಗೋಳಾಟ.
author img

By

Published : Apr 18, 2022, 5:57 PM IST

ಹುಬ್ಬಳ್ಳಿ : ವಿವಾದಿತ ಪೋಸ್ಟ್​ನಿಂದ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಸದ್ಯ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರಾಗಿರುವ ಸಂಬಂಧಿಗಳು ಇಂದು ಇಲ್ಲಿನ ಕೋರ್ಟ್‌ ಆವರಣದಲ್ಲಿ ಮಾತನಾಡಿ, ತಮ್ಮವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕಣ್ಣೀರು ಸುರಿಸಿದರು.

ಸಹಜ ಸ್ಥಿತಿಯತ್ತ ಹುಬ್ಬಳ್ಳಿ.. ಬಂಧಿತರನ್ನ ಬಿಡುಗಡೆಗೊಳಿಸುವಂತೆ ಸಂಬಂಧಿಕರು ಮನವಿ ಮಾಡಿರುವುದು..

'ನಮ್ಮ ಮಗ ತಪ್ಪು ಮಾಡಿಲ್ಲ. ಅವನನ್ನು ಸುಮ್ಮನೆ ಕರೆದುಕೊಂಡು ಹೋಗಿದ್ದಾರೆ. ನಮ್ಮ ಮಗನನ್ನು ಬಿಟ್ಟು ಬಿಡಿ ಎಂದು ಕೈ ಮುಗಿದು ಕೇಳುತ್ತೇವೆ. ಪೊಲೀಸರು ಮತ್ತೊಮ್ಮೆ ಪರಿಶೀಲನೆ ಮಾಡಲಿ. ನಮ್ಮವರು ತಪ್ಪು ಮಾಡಿದ್ರೆ ಶಿಕ್ಷೆ ಕೊಡಲಿ. ಆದರೆ, ಮನೆಯಲ್ಲಿದ್ದವರನ್ನು ಕರೆದುಕೊಂಡು ಹೋಗಿದ್ದಾರೆ.‌ ಇದರಿಂದ ಮನೆ ನಿರ್ವಹಣೆ ಕಷ್ಟವಾಗಿದೆ' ಎಂದು ಹೇಳಿದರು.‌ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 100ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಐಸ್‌ಕ್ರೀಂ ಕೊಟ್ಟರೆ ಅದು ತಲುಪುವಾಗ ಕಡ್ಡಿಯಷ್ಟೇ ಉಳಿದಿರುತ್ತೆ.. ಅನುದಾನಕ್ಕಾಗಿ ಮಠಗಳೂ 30% ಕಮೀಷನ್​ ಕೊಡ್ಬೇಕು : ದಿಂಗಾಲೇಶ್ವರ ಶ್ರೀ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.