ಹುಬ್ಬಳ್ಳಿ: ನಗರದ ಮೂರುಸಾವಿರ ಮಠಕ್ಕೂ ರಂಜಾನ್ ಹಬ್ಬಕ್ಕೂ ಅವಿನಾಭಾವ ಸಂಬಂಧವಿದೆ. ಕಳೆದ 2 ವರ್ಷಗಳಿಂದ ಕೋವಿಡ್ನಿಂದ ರಂಜಾನ್ ಸಾಮೂಹಿಕ ಪ್ರಾರ್ಥನೆ ರದ್ದು ಮಾಡಲಾಗಿತ್ತು. ಆದರೆ ಈ ವರ್ಷ ಮುಸ್ಲಿಂ ಮುಖಂಡರು ಸಾಮೂಹಿಕ ಪ್ರಾರ್ಥನೆ ನಂತರ ಮೂರು ಸಾವಿರ ಮಠಕ್ಕೆ ಭೇಟಿ ನೀಡಿ ಗುರುಸಿದ್ದರಾಜಯೋಗಿಂದ್ರ ಶ್ರೀಗಳ ಆಶೀರ್ವಾದ ಪಡೆದು, ಪರಸ್ಪರ ಶುಭಾಶಯ ಹಂಚಿಕೊಂಡರು.
ಇದೊಂದು ಭಾವೈಕ್ಯತೆಯ ಪ್ರತೀಕವಾಗಿದ್ದು, ಪ್ರತಿ ವರ್ಷ ಇದನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಸಂದರ್ಭದಲ್ಲಿ ಸ್ವಾಮೀಜಿಗಳು ಮಾತನಾಡಿ, ಬಸವ ಜಯಂತಿ ಮತ್ತು ರಂಜಾನ್ ಹಬ್ಬ ಒಂದೇ ದಿನ ಆಚರಿಸಲ್ಪಡುತ್ತಿದ್ದು, ಆ ದೇವರೇ ಭಾವೈಕ್ಯತೆಯಿಂದ ಇರುವಂತೆ ಈ ಹಬ್ಬಗಳು ಒಟ್ಟಿಗೆ ಬರುವಂತೆ ಮಾಡಿದ್ದಾನೆ. ಹೀಗಾಗಿ ಎಲ್ಲರೂ ಶಾಂತಿಯಿಂದ ಸಂತೋಷದಿಂದ ಹಬ್ಬವನ್ನು ಆಚರಿಸಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ, ಸದಾನಂದ ಡಂಗನವರ, ರಜತ ಉಳ್ಳಾಗಡ್ಡಿ ಮಠ, ಮತ್ತು ಅನೇಕ ಹಿಂದೂ-ಮಸ್ಲಿಮ ಮುಖಂಡರು ಉಪಸ್ಥಿತರಿದ್ದರು.
ಓದಿ: ಕುಶಲೋಪರಿಗೆ ಸೀಮಿತವಾದ ಸಿಎಂ ಲಂಚ್ ಮೀಟ್: ಅಮಿತ್ ಶಾ ಬಂದರೂ ಗೊಂದಲಕ್ಕೆ ಬೀಳದ ತೆರೆ?