ETV Bharat / city

ಧಾರವಾಡದಲ್ಲಿ ಯುವಕರ ಪ್ರಾಣ ಉಳಿಸಿತು ಗೃಹಿಣಿ ಮಾಡಿದ ಆ ಒಂದು ಉಪಾಯ - ಧಾರವಾಡ ಮಳೆ ಸುದ್ದಿ

ಧಾರವಾಡದ ಕುಂಬಾರ ಓಣಿಯಲ್ಲಿ ಗೃಹಿಣಿವೋರ್ವರು ಮಾಡಿದ ಉಪಾಯ ಯುವಕರ ಪ್ರಾಣ ಉಳಿಸಿದೆ.

ಮನೆ ಕುಸಿತ
author img

By

Published : Oct 21, 2019, 3:28 PM IST

ಧಾರವಾಡ: ಗೃಹಿಣಿಯೊಬ್ಬರು ಮಾಡಿದ ಉಪಾಯದಿಂದ ನಡೆಯಬಹುದಾದ ಅನಾಹುತವೊಂದು ತಪ್ಪಿದ ಘಟನೆ ನಗರದ ಕುಂಬಾರ ಓಣಿಯಲ್ಲಿ ನಡೆದಿದೆ.

ಯುವಕರ ಪ್ರಾಣ ಉಳಿಸಿದ ಮಹಿಳೆ

ಧಾರವಾಡ ನಗರದ ಕುಂಬಾರ ಓಣಿಯಲ್ಲಿ ಬೀಗ ಹಾಕಿದ ಮನೆಯ ಕಟ್ಟೆ ಮೇಲೆ ಪ್ರತಿನಿತ್ಯ ಮೊಬೈಲ್ ಹಿಡಿದು ಯುವಕರು ಹರಟೆ ಹೊಡೆಯುತ್ತಾ, ಪಬ್ಜಿ ಆಡುತ್ತಿದ್ದರು. ಪಕ್ಕದ ಮನೆಯವರು ಯುವಕರಿಗೆ ಇಲ್ಲಿ ಕೂರಬೇಡಿ ಎಂದು ಬುದ್ದಿ ಸಹ ಹೇಳಿದ್ದರು. ಆದರೆ, ಯುವಕರು ಮಾತನ್ನು ಕೇಳದ ಹಿನ್ನೆಲೆ ಮನೆ ಕಟ್ಟೆ ಮೇಲೆ ಗೃಹಿಣಿಯೊಬ್ಬರು ಡಾಂಬರ್ ಸುರಿದಿದ್ದರು. ನಿನ್ನೆ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿದಿದ್ದು, ಮಳೆಯ ರಭಸಕ್ಕೆ ಮನೆ ನೆಲಸಮವಾಗಿದೆ. ಇದರಿಂದ ನಡೆಯಬಹುದಾಗಿದ್ದ ಅನಾಹುತ ತಪ್ಪಿಸಿದಂತಾಗಿದೆ.

Intro:ಧಾರವಾಡ: ಪಕ್ಕದ ಮನೆಯವರು ಮಾಡಿದ ಪ್ಲಾನ್ ನಿಂದ ನಡೆಯಬಹುದಾದ ಅನಾಹುತವೊಂದು ತಪ್ಪಿಹೋಗಿದೆ. ಕಟ್ಟೆ ಮೇಲೆ ಕುಳಿತು ಹರಟೆ ಹೊಡೆಯುವವರ ಜೀವ ಗೃಹಿಣಿಯ ಪ್ಲಾನ್ ನಿಂದ ಉಳಿದಿದೆ.

ಧಾರವಾಡದ ಕುಂಬಾರ ಓಣಿಯಲ್ಲಿ ಬೀಗ ಹಾಕಿದ ಮನೆಯ ಕಟ್ಟೆ ಮೇಲೆ ನಿತ್ಯ ಮೊಬೈಲ್ ಹಿಡಿದು ಪಬ್ಜಿ ಆಡಬಾರದೆಂದು ಡಾಂಬರ್ ಸುರಿದಿದ್ದರ ಪರಿಣಾಮ‌ ಅಲ್ಲಿ ಯುವಕರು ‌ಕುಳಿತುಕೊಳ್ಳಲು ಸಾಧ್ಯವಾಗಿಲ್ಲ, ಆದ್ದರಿಂದ ಯುವಕರ ಜೀವ ಉಳಿದುಕೊಂಡಿದೆ.Body:ಮನೆ ಬೀಳುತ್ತೆ ಕೂಡಬೇಡಿ ಎಂದು ಡಾಂಬರ ಸುರಿದಿದ್ದ ಎದುರು ಮನೆಯ ಗೃಹಿಣಿ. ನಿನ್ನೆ ಸುರಿದ ಮಳೆಗೆ ರಾಜು ಕುರಡಿಕೇರಿ ಎನ್ನುವರ ಮನೆ ನೆಲಸಮವಾಗಿದೆ. ಎದುರು ಮನೆಯ ಮನೋರಮಾ ಘಾಟಗೆ ಅವರ ಸಮಯ ಪ್ರಜ್ಞೆಯಿಂದ ನಡೆಯಬಹುದಾದ ಅನಾಹುತ ತಪ್ಪಿಹೋಗಿದೆ.

ಬೈಟ್: ಮನೋರಮಾ ಘಾಟಗೆ, ಡಾಂಬರ್ ಹಾಕಿದ ಸ್ಥಳೀಯ ಮಹಿಳೆConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.