ಧಾರವಾಡ: ಕನ್ನಡ ಚಿತ್ರರಂಗದ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಿಧನ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ. ನಟ ಪುನೀತ್ ರಾಜ್ಕುಮಾರ್ ಇತ್ತೀಚೆಗೆ ನುಗ್ಗಿಕೇರಿ ಹನುಮಂತ ದೇವರ ಭಕ್ತರಾಗಿದ್ದರು.
ಧಾರವಾಡ ಹೊರವಲಯದ ನುಗ್ಗಿಕೇರಿ ಗ್ರಾಮದಲ್ಲಿರುವ ಹನುಮಂತ ದೇವಸ್ಥಾನಕ್ಕೆ ಅಪ್ಪು ಹಲವು ಬಾರಿ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ಯುವರತ್ನ ಶೂಟಿಂಗ್ ವೇಳೆ ಮೊದಲ ಭೇಟಿ ಕೊಟ್ಟಿದ್ದರು.
ಆ ಬಳಿಕ ನುಗ್ಗಿಕೇರಿ ಹನುಮಂತನ ಭಕ್ತರಾಗಿದ್ದ ಅವರು, ಉತ್ತರ ಕರ್ನಾಟಕಕ್ಕೆ ಬಂದಾಗ ತಪ್ಪದೇ ದರ್ಶನ ಪಡೆಯುತ್ತಿದ್ದರು. ಕಳೆದ ಒಂದೂವರೆ ವರ್ಷದಲ್ಲಿ ಮೂರು ಬಾರಿ ಹನುಮಂತ ದೇವರ ದರ್ಶನ ಪಡೆದಿದ್ದರು.