ETV Bharat / city

ಜಾಮಿಯಾ ಮಸೀದಿ ಈ ಹಿಂದೆ ದೇವಸ್ಥಾನವಾಗಿತ್ತು ಎಂಬುದಕ್ಕೆ ಪೂರಕ ದಾಖಲೆ ಸಿಕ್ಕಿದೆ: ಮುತಾಲಿಕ್ - Jamia Masjid in Srirangapatna

ಜಾಮಿಯಾ ಮಸೀದಿಯಲ್ಲಿ ನಾಗರ , ಕಲ್ಯಾಣಿ, ಗರುಡ ಚಿಹ್ನೆ ಇದೆ. ಇದರ ಜೊತೆಗೆ ಟಿಪ್ಪು ಸುಲ್ತಾನನೇ ಅದನ್ನು ಕೆಡವಿದ್ದು ಅನ್ನೋದಕ್ಕೆ ಮತ್ತೊಂದು ಪೂರಕ ದಾಖಲೆ ಸಿಕ್ಕಿದೆ. ನಾರಾಯಣನ ಮೂರ್ತಿ ಕತ್ತರಿಸಿ ಅದನ್ನು ನೀರಿನ ಗುಂಡಿಯಲ್ಲಿ ಎಸೆದಿದ್ದಾರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್ ಹೇಳಿದ್ದಾರೆ.

ಪ್ರಮೋದ್​ ಮುತಾಲಿಕ್
ಪ್ರಮೋದ್​ ಮುತಾಲಿಕ್
author img

By

Published : Jun 8, 2022, 9:42 AM IST

Updated : Jun 8, 2022, 10:04 AM IST

ಧಾರವಾಡ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದ ಹಿನ್ನೆಲೆ ಹಿಂದೂಪರ ಮುಖಂಡರಿಂದ ಸ್ಫೋಟಕ ಸಾಕ್ಷ್ಯ ಬಹಿರಂಗವಾಗಿದೆ. ಜಾಮಿಯಾ ಮಸೀದಿ ಪ್ರದೇಶದಲ್ಲಿ ಹಿಂದೆ ದೇವಸ್ಥಾನವಿತ್ತು ಎಂಬುದು ಗೊತ್ತಾಗಿದೆ. ಮಸೀದಿಯಲ್ಲಿ ಸಿಕ್ಕ ಪುಸ್ತಕದಲ್ಲಿ ದೇವಸ್ಥಾನವಿರುವುದು ತಿಳಿದು ಬಂದಿದೆ ಅಂತ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಜಾಮಿಯಾ ಮಸೀದಿಯಲ್ಲಿ ನಾಗರ , ಕಲ್ಯಾಣಿ, ಗರುಡ ಚಿಹ್ನೆ ಇದೆ. ಇದರ ಜೊತೆಗೆ ಟಿಪ್ಪು ಸುಲ್ತಾನನೇ ಅದನ್ನು ಕೆಡವಿದ್ದು ಅನ್ನೋದಕ್ಕೆ ಮತ್ತೊಂದು ಪೂರಕ ದಾಖಲೆ ಸಿಕ್ಕಿದೆ. ಅದು 70 ವರ್ಷದ ಹಿಂದೆ ಪ್ರಕಟವಾದ ಪುಸ್ತಕ. ಅದರಲ್ಲಿ ಎಲ್ಲವೂ ಕೂಡ ದಾಖಲಾಗಿದೆ. ನಾರಾಯಣನ ಮೂರ್ತಿ ಕತ್ತರಿಸಿ ಅದನ್ನು ನೀರಿನ ಗುಂಡಿಯಲ್ಲಿ ಎಸೆದಿದ್ದಾರೆ. ಅಲ್ಲದೇ, ಆ ಪುಸ್ತಕದಲ್ಲಿ ಆಂಜನೇಯನ ದೇವಸ್ಥಾನದ ಚಿತ್ರವಿದೆ. ಸರ್ಕಾರಕ್ಕೆ ಮತ್ತೆ ಯಾವ ದಾಖಲೆ ಬೇಕು ಎಂದು ಪ್ರಶ್ನಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್

ವಾದ, ವಿವಾದ ಮಾಡುವ ಅವಶ್ಯಕತೆ ಇಲ್ಲ. 7 ಕೊಪ್ಪರಿಗೆ ಚಿನ್ನಾಭರಣ ಕದ್ದು ಅದರಿಂದಲೇ ಅಲ್ಲಿ ಮಸೀದಿ ಕಟ್ಟಲಾಗಿದೆ. ವಿಜಯನಗರದ ತಿಮ್ಮಣ್ಣ ನಾಯಕ ಎಂಬಾತ ಅದನ್ನು ಕಟ್ಟಿದ್ದ ಎಂಬ ಉಲ್ಲೇಖ ಇದೆ. ಕೂಡಲೇ ಈ ವಕ್ಫ ಬೋರ್ಡ್‌ ರದ್ದು ಮಾಡಬೇಕು. ಅದೊಂದು ಬೋಗಸ್ ಬೋರ್ಡ್ ಆಗಿದೆ. ಮೊದಲು ಮದರಸಾದಲ್ಲಿ ಓದುತ್ತಿರುವವರನ್ನು ಹೊರಗೆ ಹಾಕಬೇಕು. ಕೂಡಲೇ ಮಸೀದಿ ತೆರವು ಮಾಡಬೇಕು. ಪ್ರತಿ ಶನಿವಾರ ಅಲ್ಲಿ ಆಂಜನೇಯ ದೇವರ ಪೂಜೆಗೆ ಅವಕಾಶ ಕೊಡಬೇಕು. ದಾಖಲೆ ಸಮೇತ ಅವರನ್ನು ಹೊರಗೆ ಹಾಕಬೇಕು ಎಂಬುದೇ ನಮ್ಮ ಬೇಡಿಕೆ ಎಂದಿದ್ದಾರೆ.

ಇದನ್ನು ಓದಿ:ಕೇಂದ್ರ ಗೃಹ ಸಚಿವಾಲಯದ ಕಟ್ಟಡದಲ್ಲಿ ಅಗ್ನಿ ಆಕಸ್ಮಿಕ.. ತಕ್ಷಣವೇ ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ

Last Updated : Jun 8, 2022, 10:04 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.