ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹಿಡಿದ ಹಿನ್ನೆಲೆಯಲ್ಲಿ ನೂತನ ಮೇಯರ್ ಮತ್ತು ಉಪಮೇಯರ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಶುಭ ಕೋರಿದರು. ಮೂರು ವರ್ಷಗಳ ಬಳಿಕ ಪಾಲಿಕೆಗೆ ಈಗ ಆಡಳಿತ ಕಾರ್ಯಗಳು ಚುರುಕುಗೊಳಲಿದೆ. ನಮ್ಮ ಪಕ್ಷದ ಸದಸ್ಯರು ಅಧಿಕಾರ ಹಿಡಿದಿರುವುದು ಸಂತಸದ ವಿಷಯ ಎಂದರು.
ಈ ಕುರಿತು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಜನಪರ ಆಡಳಿತವನ್ನು ನೀಡಿ ಜನರ ಮನ್ನಣೆಗೆ ಮೇಯರ್ ಮತ್ತು ಉಪಮೇಯರ್ ಪಾತ್ರವಾಗಬೇಕು. ಅಲ್ಲದೇ ಜನರ ಆಶೋತ್ತರಗಳಿಗೆ ಸ್ಪಂದಿಸುವ ಮೂಲಕ ಅವಳಿನಗರದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ನೂತನ ಮೇಯರ್ ಈರೇಶ್ ಅಂಚಟಗೇರಿ ಮತ್ತು ಉಪಮೇಯರ್ ಉಮಾ ಮುಕುಂದ ಅವರಿಗೆ ಸಲಹೆ ನೀಡಿದರು.
ಎಸ್.ಡಿ.ಪಿ.ಐ ಸಂಘಟನೆ ಕಾಂಗ್ರೆಸ್ ಬೆಳೆಸಿದ ಕೂಸು: ಎಸ್ಡಿಪಿಐ ಸಂಘಟನೆ ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ಪಕ್ಷಗಳು ಬೆಳೆಸಿರುವ ಕೂಸು. ಸಿದ್ಧರಾಮಯ್ಯ ಸಿಎಂ ಇದ್ದಾಗ ಎಸ್ಡಿಪಿಐ ಮೇಲಿನ ಕೇಸ್ಗಳನ್ನು ವಜಾ ಮಾಡಿದರು. ಇನ್ನೂ ಸಿದ್ದರಾಮಯ್ಯ ಆರ್ಎಸ್ಎಸ್ ಮತ್ತು ಬಿಜೆಪಿ ಮೂಲ ಕೇಳತ್ತಾರೆ. ಆದರೆ, ಅವರ ಮೂಲವನ್ನೇ ಜನ ಕಿತ್ತುಕೊಂಡಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
ಸಿದ್ದರಾಮಯ್ಯಗೆ ಮೂಲ ನೆಲೆ ಇಲ್ಲ. ಕಾಂಗ್ರೆಸ್ ಮೂಲ ಇಟಲಿಯದು. ಕೇರಳ ಸರ್ಕಾರ ಎಸ್ಡಿಪಿಐ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು ದೇಶಕ್ಕೆ ಸಂದೇಶ ನೀಡಬೇಕು. ಬಾಲಕನ ಕೈಯಲ್ಲಿ ಘೋಷಣೆ ಕೂಗಿಸಿದವರ ಬಗ್ಗೆ ತನಿಖೆ ಆಗಬೇಕು ಎಂದು ಅವರು ಇದೇ ವೇಳೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಅವಳಿ ನಗರದ ಜನರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ: ನೂತನ ಮೇಯರ್ - ಉಪಮೇಯರ್ ಭರವಸೆ