ಹುಬ್ಬಳ್ಳಿ: ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಮಗುವನ್ನು ನಗರದ ಸ್ಪರ್ಶ ಆಸ್ಪತ್ರೆಯಿಂದ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಆ್ಯಂಬುಲೆನ್ಸ್ ಮೂಲಕ ಝೀರೋ ಟ್ರಾಫಿಕ್‍ನಲ್ಲಿ ಕೊಂಡೊಯ್ಯಲಾಗಿದೆ.
ಆಂಬುಲೆನ್ಸ್ ಡ್ರೈವರ್ ಕಿರಣ್ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಕೇವಲ 4 ಗಂಟೆ 50 ನಿಮಿಷದಲ್ಲಿ (ಸುಮಾರು 411 ಕಿ.ಮೀ.) ಸುರಕ್ಷಿತವಾಗಿ ಆ್ಯಂಬುಲೆನ್ಸ್ ಚಾಲನೆ ಮಾಡಿ ತಲುಪಿಸಿದ್ದಾರೆ. ಕಿರಣ್ ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ಧಾರವಾಡದ ಸಮಾನುಲ್ಲ ಹಾಗೂ ಸಬಿಯಾ ಬಾನು ದಂಪತಿಯ ಒಂದೂವರೆ ತಿಂಗಳಿನ ಮಗುವಿನ ಹೃದಯದಲ್ಲಿ ನೀರು ತುಂಬಿಕೊಂಡಿತ್ತು. ಕಳೆದ 3 ದಿನದಿಂದ ಹೃದಯದ ಕಾಯಿಲೆಯಿಂದ ಮಗು ಬಳಲುತ್ತಿತ್ತು. ಹೀಗಾಗಿ ಮಗುವಿನ ಹೃದಯದಲ್ಲಿ ನೀರು ತಗೆಯಲು ಹುಬ್ಬಳ್ಳಿಯ ಸ್ಪರ್ಶ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ರವಾನೆ ಮಾಡಲಾಗಿದೆ.