ಹುಬ್ಬಳ್ಳಿ: ಮೂರುಸಾವಿರ ಮಠದ ಆವರಣದಲ್ಲಿ ಫೆ. 23 ರಂದು ನಡೆಯಲಿರುವ ದಿಂಗಾಲೇಶ್ವರ ಶ್ರೀಗಳ ಸತ್ಯ ದರ್ಶನ ಸಭೆಗೆ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಉತ್ತರಾಧಿಕಾರಿ ವಿವಾದ ಕೋರ್ಟ್ಲ್ಲಿ ಇರುವಾಗ ಮಠದ ಆವರಣದಲ್ಲಿ ಸಭೆ ನಡೆಸುವುದು ಸರಿಯಲ್ಲ ಎಂದು ಸ್ವಾಮೀಜಿಯವರಿಗೆ ಡಿಸಿಪಿ ಪಿ. ಕೃಷ್ಣಕಾಂತ ಹೇಳಿದ್ದಾರೆ ಎನ್ನಲಾಗಿದೆ.
ತಾತ್ಕಾಲಿಕ ಗನ್ ಮ್ಯಾನ್:
ವಿವಾದದ ಹಿನ್ನೆಲೆ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರಿಗೆ ತಾತ್ಕಾಲಿಕವಾಗಿ ಗನ್ ಮ್ಯಾನ್ ಒದಗಿಸಲಾಗಿದ್ದು, ಮಠದ ಆವರಣದಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಹಾನಗಲ್ ಮಠಕ್ಕೆ ತೆರಳಿದ್ದ ಶ್ರೀಗಳು ನಿನ್ನೆ ಮಠಕ್ಕೆ ಮರಳಿದ್ದು, ಯಾರಿಗೂ ಮಠದ ಆಡಳಿತ ಮಂಡಳಿ ಸ್ವಾಮೀಜಿ ಭೇಟಿಗೆ ಅವಕಾಶ ನೀಡುತ್ತಿಲ್ಲ. ಘಟಪ್ರಭಾದ ಮಲ್ಲಿಕಾರ್ಜುನ ಸ್ವಾಮೀಜಿ ಇಂದು ಮಠಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ.