ಹುಬ್ಬಳ್ಳಿ: ಇಟ್ಟಿಗಟ್ಟಿ ಬಳಿ ನಡೆದ ಭೀಕರ ರಸ್ತೆ ಅಪಘಾತದ ಸುದ್ದಿ ಕೇಳಿ ತುಂಬ ಬೇಸರವಾಗಿದೆ. ಆದಷ್ಟು ಬೇಗ ಬೈಪಾಸ್ ರಸ್ತೆಯನ್ನು 6 ಲೇನ್ ರಸ್ತೆಯನ್ನಾಗಿ ಮಾಡಲು ನಿತಿನ್ ಗಡ್ಕರಿ ಅವರಿಗೆ ತಿಳಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಓದಿ: ಧಾರವಾಡ ಅಪಘಾತ: ಒಂದೇ ಶಾಲೆಯಲ್ಲಿ ಓದಿದ್ದ 11 ಬಾಲ್ಯದ ಗೆಳತಿಯರು ಸಾವು!
ನಗರದಲ್ಲಿಂದು ಮಾತನಾಡಿದ ಅವರು, ಇಟಿಗಟ್ಟಿ ಬಳಿ ನಿರಂತರ ಅಪಘಾತವಾಗುತ್ತಿವೆ. ಹೀಗಾಗಿ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ 6 ಲೈನ್ ಆಗಬೇಕಾಗಿದೆ. ಅದಕ್ಕೆ ಡಿಪಿಆರ್ ರೆಡಿ ಆಗುತ್ತಿದ್ದು, ಹಣ ಕೊಡಲು ಕೇಂದ್ರ ಸರ್ಕಾರ ರೆಡಿಯಿದೆ. 2024ರ ವರೆಗೆ ಅದು ಅಶೋಕ್ ಖೇಣಿ ಒಡೆತನದ ನೈಸ್ ಸಂಸ್ಥೆಯಡಿಯಿದೆ. ಅವರ ಹತ್ತಿರ ಈ ಬಗ್ಗೆ ಮಾತನಾಡಿದ್ದು, ಸಹಕಾರ ನೀಡುವುದಾಗಿ ತಿಳಿಸಿದರು ಎಂದರು.