ETV Bharat / city

ಧಾರವಾಡ ಮಂದಿಯ ನಿದ್ದೆಗೆಡಿಸಿದ್ದ ಚಿರತೆ ಸೆರೆ.. ನಿಟ್ಟುಸಿರು ಬಿಟ್ಟ ಜನತೆ - Dharwad leopard Captured

ಕವಲಗೇರಿ ಗ್ರಾಮದ ಶಿವಪ್ಪ ಉಪ್ಪಾರ ಎಂಬುವರ ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟಿದ್ದ ಚಿರತೆ ಕೊನೆಗೂ ಸೆರೆಯಾಗಿದೆ.

leopard Captured in Dharwad
ಧಾರವಾಡದಲ್ಲಿ ಚಿರತೆ ಸೆರೆ
author img

By

Published : Sep 26, 2021, 9:16 AM IST

ಧಾರವಾಡ: ಕಳೆದ ಕೆಲ‌ ದಿನಗಳಿಂದ ತಾಲೂಕಿನ ಕವಲಗೇರಿ ಗ್ರಾಮದ ಜಮೀನಿನಲ್ಲಿ ಬೀಡು ಬಿಟ್ಟಿದ್ದ ಚಿರತೆ ಕೊನೆಗೂ ಸೆರೆಯಾಗಿದೆ. ಆಗಾಗ್ಗೆ ಪ್ರತ್ಯಕ್ಷವಾಗಿ ಆತಂಕ‌ ಮೂಡಿಸಿದ್ದ ಚಿರತೆ ಇದೀಗ ಬೋನಿಗೆ ಬಿದ್ದಿದೆ.

ಕವಲಗೇರಿ ಗ್ರಾಮದ ಶಿವಪ್ಪ ಉಪ್ಪಾರ ಎಂಬುವವರ ಕಬ್ಬಿನ ಗದ್ದೆಯಲ್ಲಿ ಚಿರತೆ ವಾಸವಾಗಿತ್ತು. ಆ ಚಿರತೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಹರಸಾಹಸ ಪಡುತ್ತಿದ್ದರು. ಇದೀಗ ಅರಣ್ಯ ಇಲಾಖೆ ಸಿಬ್ಬಂದಿಯ ಚಿರತೆ ಸೆರೆ ಕಾರ್ಯಾಚರಣೆ ಯಶಸ್ವಿಯಾಗಿದೆ.

ಧಾರವಾಡದಲ್ಲಿ ಚಿರತೆ ಸೆರೆ

ಇದನ್ನೂ ಓದಿ: ಉತ್ತರಕನ್ನಡದಲ್ಲಿ ಹೆಚ್ಚುತ್ತಿರುವ ಪ್ರಾಕೃತಿಕ ವಿಕೋಪ.. ತಂತ್ರಜ್ಞಾನಗಳ ಮೂಲಕ ನಿರ್ವಹಣೆಗೆ ಪ್ಲಾನ್​

ಕವಲಗೇರಿ ಗ್ರಾಮದಿಂದ ಮತ್ತೆ ಗೋವನಕೊಪ್ಪಕ್ಕೆ ಚಿರತೆ ಹೋಗಿತ್ತು ಎನ್ನಲಾಗಿತ್ತು. ಆದ್ರೆ ಕವಲಗೇರಿಯ ಶಿವಪ್ಪ ಉಪ್ಪಾರ ಅವರ ಜಮೀನಿನಲ್ಲಿ ಚಿರತೆ ಬೋನಿಗೆ ಬಿದ್ದಿದ್ದು, ಇದರಿಂದ ಅಕ್ಕಪಕ್ಕದ ಜಮೀನಿನ ರೈತರ ಆತಂಕ ದೂರವಾಗಿದೆ. ಚಿರತೆ ಹಿಡಿಯಲು ಅರಣ್ಯ ಇಲಾಖೆಯು ಗದಗ, ಹಾವೇರಿಯಿಂದ ತಜ್ಞ ಅಧಿಕಾರಿಗಳನ್ನು ಕರೆಸಿ ಕಾರ್ಯಾಚರಣೆ ನಡೆಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.