ETV Bharat / city

ಕೈ ಕೊಟ್ಟ ಲ್ಯಾಪ್‌ಟಾಪ್... ಗ್ರಾಹಕ ಕೋರ್ಟ್​ಗೆ ಹೋಗಿ ನ್ಯಾಯ ಪಡೆದುಕೊಂಡ ವ್ಯಕ್ತಿ - ಹುಬ್ಬಳ್ಳಿ ಲೆನೊವೊ ಕಂಪನಿ ಲಾಪ್​ಟಾಪ್​ ಸಮಸ್ಯೆ ವಿರುದ್ಧ ಕಂಜುಮರ್​ ಕೋರ್ಟ್​​​​ನಲ್ಲಿ ದೂರು

ಲೆನೊವೊ ಸರ್ವೀಸ್ ಸೆಂಟರ್‌ನವರು ನಾನಾ ಕಾರಣ ಹೇಳಿ ಲೆನೊವೊ ಕಂಪನಿಯಿಂದ ಹೊಸ ಮದರ್‌ ಬೋರ್ಡ್ ಕೊಳ್ಳಲು ಹೇಳಿ ಸುಮಾರು 43,000ಕ್ಕಿಂತ ಹೆಚ್ಚು ಮೊತ್ತದ ಕೊಟೇಶನ್ ಕಳಿಸಿದ್ದಾರೆ. ಹೀಗಾಗಿ ವಿಕ್ರಮ ಎಂಬುವರು ಧಾರವಾಡ ಗ್ರಾಹಕ ವೇದಿಕೆ ಮೊರೆ ಹೋಗಿದ್ದರು.

lenovo-client-went-to-the-consumer-court-and-obtained-justice
ಲ್ಯಾಪ್‌ಟಾಪ್
author img

By

Published : Feb 13, 2021, 5:23 PM IST

ಹುಬ್ಬಳ್ಳಿ: ಲ್ಯಾಪ್‌ಟಾಪ್ ರಿಪೇರಿ ನೆಪ ಹೇಳಿ ಹೆಚ್ಚಿನ ಹಣ ಕೇಳಿದ್ದ ಲೆನೊವೊ ಕಂಪನಿ ವಿರುದ್ಧ ಗ್ರಾಹಕರೊಬ್ಬರು ಜಿಲ್ಲಾ ಗ್ರಾಹಕ​​ ಕೋರ್ಟ್​​ಗೆ ದೂರು ನೀಡಿದ ಹಿನ್ನೆಲೆ 8 ಸಾವಿರ ರೂ. ಪರಿಹಾರ ಮತ್ತು ಕನಿಷ್ಠ ಸೇವಾ ಶುಲ್ಕ ಪಡೆದು 30 ದಿನಗಳಲ್ಲಿ ಸಮಸ್ಯೆ ಬಗೆಹರಿಸಿಕೊಡುವಂತೆ ಕೋರ್ಟ್ ಆದೇಶ ನೀಡಿದೆ.

ವಿಕ್ರಮ ಕುಮಠಾ ಎಂಬುವವರು 2017ರಲ್ಲಿ ಲೆನೊವೊ ವೈ-520 ಲ್ಯಾಪ್​ಟಾಪ್‌ಅನ್ನು ಸುಮಾರು 97,000 ರೂ.ಗೆ ಖರೀದಿಸಿದ್ದರು. 2019ರ ನವಂಬರ್​ ತಿಂಗಳಲ್ಲಿ ಲ್ಯಾಪ್‌ಟಾಪ್ ಕೆಲಸ ಮಾಡುವಾಗ ಕೈ ಕೊಟ್ಟಿದೆ. 2 ವರ್ಷದ ವಾರಂಟಿ ಅವಧಿ ಮುಗಿದ ಕಾರಣ ಆನ್‌ಲೈನ್ ಕಂಪ್ಲೇಂಟ್ ಮೂಲಕ ಕಸ್ಟಮರ್ ಕೆರ್​​ ನಂಬರ್​ ಪಡೆದು, ತಮ್ಮ ಲ್ಯಾಪ್‌ಟಾಪ್ ತೊಂದರೆ ತಿಳಿಸಿದ್ದಾರೆ. ಬಳಿಕ, ಹುಬ್ಬಳ್ಳಿಯ ಕೆಂಗೇರಿ ರಸ್ತೆಯಲ್ಲಿದ್ದ ಲೆನೊವೊ ಸರ್ವಿಸ್ ಸೆಂಟರ್‌ಗೆ ರಿಪೇರಿ ಮಾಡಲು ಕೊಟ್ಟಿದ್ದರು.

ಗ್ರಾಹಕ ಕೋರ್ಟ್​ಗೆ ಹೋಗಿ ನ್ಯಾಯ ಪಡೆದುಕೊಂಡ ವ್ಯಕ್ತಿ

ಆದರೆ ಸರ್ವೀಸ್ ಸೆಂಟರ್‌ನವರು ನಾನಾ ಕಾರಣ ಹೇಳಿ ಲೆನೊವೊ ಕಂಪನಿಯಿಂದ ಹೊಸ ಮದರ್‌ಬೋರ್ಡ್ ಕೊಳ್ಳಲು ಹೇಳಿ ಸುಮಾರು 43,000ಕ್ಕಿಂತ ಹೆಚ್ಚು ಮೊತ್ತದ ಕೊಟೇಶನ್ ಕಳಿಸಿದ್ದಾರೆ. ಹೀಗಾಗಿ ವಿಕ್ರಮ ಧಾರವಾಡ ಗ್ರಾಹಕ ವೇದಿಕೆ ಮೊರೆ ಹೋಗಿದ್ದರು.

ವಿಕ್ರಮ ಸ್ವತಃ ತಾವೇ ವಾದ ಮಂಡಿಸಿದ್ದರು. ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆ, ಪರಿಹಾರ ಹಾಗೂ ಕನಿಷ್ಠ ಸೇವಾ ಶುಲ್ಕ ಪಡೆದು ಲ್ಯಾಪ್‌ಟಾಪ್ ಸರಿಪಡಿಸಿಕೊಡುವಂತೆ ಇದೇ ಫೆ. 1ರಂದು ಲೆನೊವೊ ಕಂಪನಿಗೆ ಆದೇಶಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.